ಸೋಮವಾರ, ಸೆಪ್ಟೆಂಬರ್ 24, 2012

ಪ್ರೀತಿ ಎಂದರೇನು?ಬೇಕು ಪ್ರೀತಿ.

ಪ್ರೀತಿ,ಪ್ರೇಮ,ಸ್ನೇಹ,ಹೊಂದಾಣಿಕೆ,ಆತ್ಮೀಯತೆ,ಪರಸ್ಪರ ವಿಶ್ವಾಸ,ನಂಬಿಕೆ....ಇವೆಲ್ಲಾ ಇದ್ದಲ್ಲಿ ಜೀವನ ಎಷ್ಟು ಮಧುರ!
ಕೆಲವರನ್ನು ಕಂಡೊಡನೆ ಏನೋ ಆತ್ಮೀಯತೆ,ಒಲವು,ನಮ್ಮವರು ಎಂಬ ಭಾವನೆ.ಅವರಿಗಾಗಿ ಮಿಡಿಯುವ ಮನ,ಬಡಿಯುವ ಹೃದಯ,ಭಾವನೆಗಳ ಮಹಾಪೂರ.ನನ್ನವನು,ನನ್ನವಳು ಎಂಬ ಭಾವನೆ.
ಕೆಲವೇ ದಿನಗಳಲ್ಲಿ ಆತ ಆಕೆಯ ಮನಕ್ಕೆ ಹತ್ತಿರವಾಗಿದ್ದ.ಐ ಮಿಸ್ ಯು, ಐ ಲವ್ ಯು, ಎಂದು ಪದಗಳ ವಿನಿಮಯವಾಗಲು ಶುರು.ಏನಿದು ಲವ್? ಎಷ್ಟು ಸುಲಭವಾಗಿ ಎಲ್ಲರೂ ಈ ಪದ ಬಳಕೆಮಾಡುತ್ತಾರಲ್ಲ?ಆತನ ಪ್ರಕಾರ
ಲವ್ ಎಂದರೆ ಸಂತೋಷ ಹಾಗೂ ನೆಮ್ಮದಿ ಅಥವಾ ಸಮಾಧಾನ .ಯಾರಿಂದ ಇದು ದೊರಕುವುದೋ ಅವರಿಗೆ ಐ ಲವ್ ಯು.ಎನ್ನುತ್ತೇವೆ. ಎóಷ್ಟು ಚೆಂದಾದ ಉತ್ತರ.ಪ್ರೀತಿ ಎಲ್ಲರ ಜೀವನದಲ್ಲಿ ಅತ್ಯವಶ್ಯಕ.ಆರೋಗ್ಯಕ್ಕೂ ಮುಖ್ಯ.ಆದರೆ ಈಗಿನ ಕಾಲದಲ್ಲಿ ಅದು ದೊರೆಯುವುದಾದರೂ ಎಲ್ಲಿಂದ?ಗಂಡ ಹೆಂಡತಿ ಸಂಸಾರದ ಹೊಣೆ,ತಾಪತ್ರಯ ಇವುಗಳಲ್ಲೇ ಮುಳುಗಿ, ಕೆಲವೊಮ್ಮೆ ವಾದ,ವಿವಾದ,ಚರ್ಚೆ,ಮುನಿಸು,ಜಗಳ,ಜವಾಬ್ದಾರಿ,ಮಕ್ಕಳು,ಮನೆ,ಸಾಲ ಇವುಗಳಿಗೇ ತಮ್ಮ ಜೀವನವನ್ನು ಮುಡಿಪಾಗಿಸುತ್ತಾರೆ.ತಮಗಾಗಿ?ಸಮಯ?ಪ್ರೀತಿ ಸಂತೋಷದ ರಸ ನಿಮಿóಷಗಳು?ಇವೆಲ್ಲಾ ನಿರ್ಲಕ್ಷ್ಯಗೊಂಡ,ಮೂಲೆಗಿರಿಸಿದ ಮೌಲ್ಯಗಳು.
ನಮ್ಮ ಸಂಗಾತಿಯೊಡನೆ ನಮಗೆ ಸಂಪೂರ್ಣ ಭಾವನಾತ್ಮಕ ಸಂತೃಪ್ತಿ ದೊರೆತಿರಬಹುದು ಅಥವಾ ಸ್ವಲ್ಪ ಕೊರತೆಯಾಗಿರಬಹುದು.ಅತ್ಯಂತ ಆತ್ಮೀಯವಾದ,ಪ್ರಿಯವಾದ ಸ್ನೇಹಿತ,ಸ್ನೇಹಿತೆಯ ಮೂಲಕ ಅದು ದೊರೆಯುವುದು. ಆದರೆ ಇದು ಎóಷ್ಟು ಜನರಿಗೆ ಲಭ್ಯ?ಅವರಿಬ್ಬರೂ ಸ್ನೇಹಿತರಾಗಿ,ಭಾವನೆಗಳು,ಮನಸ್ಸು ಹೊಂದಾಣಿಕೆಯಾಗಿ ಪರಸ್ಪರ  ಆಕರ್ಷಿತರಾಗಿ ಎರಡು ದೇಹ,ಒಂದೇ ಮನಸ್ಸು ಎಂಬಂತಾಗಿದ್ದು ಕೆಲವೇ ದಿನಗಳಲ್ಲಿ.ಆತ ಅಕೆಗೆ ತೋರುತ್ತಿದ್ದ ಪ್ರೀತಿ,ಗೌರವ,ಮಾರ್ಗದರ್ಶನ,ಸಹಕಾರ,ಮೆಚ್ಚುಗೆ,ಒಲವು,ಪ್ರತಿ ಹಂತದಲ್ಲೂ ಆಕೆಯನ್ನು ಕೈಹಿಡಿದು ನಡೆಸುವ ರೀತಿಗೆ ಆಕೆ ಸಂಪೂರ್ಣ ಮಾರುಹೋಗಿದ್ದಳು.ಎಂದೂ,ಒಮ್ಮೆಯೂ ಸಿಡುಕದ,ಸಿಟ್ಟಾಗದ ಆತನ ವ್ಯಕ್ತಿತ್ವ ಸವಾಲಾಗಿತ್ತು.ಆತನಿಂದ ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ ಎಂಬುದನ್ನರಿತಳು.ಆತನ ಮಾತಿಗೆ,ಪ್ರೀತಿಗೆ ಮಾರುಹೋಗಿ ಗಂಟೆಗಟ್ಟಲೆ ಜೊತೆಯಾಗಿ ಕುಳಿತು ಪರಸ್ಪರ ಮುಖಾಮುಕಿ,ಮಾತನಾಡುತ್ತಾ ಕಳೆದ ಸಮಯವೆಷ್ಟೋ?ಕಲಿತ ವಿಷಯಗಳೆಷ್ಟೋ?ವೃತ್ತಿ ಬೇರೆ,ಭಾಷೆ ಬೇರೆಯಾದರೇನು?ನೋಟ,ನಗು,ಮೌನ,ಕಂಗಳು,ಸ್ಪರ್ಷ ಇವು ಮನದಾಳದ ಇಂಗಿತ,ಭಾವನೆ,ಇಚ್ಚೆ ಎಲ್ಲವನ್ನೂ ರವಾನಿಸುವ,ಅರ್ಥೈಸುವ ಸೇತುವೆಗಳಾಗಿದ್ದವು.ನನಗಾಗಿ ನೀನು,ನಿನಗಾಗಿ ನಾನು ಎಂಬಂತೆ ಎರಡು ಹೃದಯಗಳೂ ಲಯಬಧ್ದವಾಗಿ ಹಾಡುತ್ತಾ,ಬಡಿಯುತ್ತಾ,ಸಂತೋಷದ ಅಲೆಗಳನ್ನು ತೇಲಿ ಬಿಡುತ್ತಾ,ಹೆಜ್ಜೆಹೆಜ್ಜೆಗೂ ಜೊತೆಯಾಗಿ,ನಗುವಿನ ತರಂಗಗಳು ಒಂದಾಗಿ,ಸುಮಧುರ ಕಂಠಗಳು ಹಕ್ಕಿಗಳ ಚಿಲಿಪಿಲಿಗೆ ಸವಾಲಾಗುತ್ತಿದ್ದಂತೆ ,ಎದುರು ಬಂದ ಅಲೆಗಳೆಷ್ಟೋ?ಎಲ್ಲೇ ಇರು,ಹೇಗೇ ಇರು ಎಂದೆಂದಿಗೂ ನಾನು ನಿನ್ನವನು ಎಂದು ಆಕೆಯ ಕೈಗೆ ಮುತ್ತಿಟ್ಟು ಆತ ಕೊಟ್ಟ ಭಾಷೆ,ಎಂದೆಂದಿಗೂ ನಿಜವೆಂಬುದು ಆಕೆಗೆ ಗೊತ್ತು.ಜೀವನ ಇನ್ನೆಷ್ಡು ದಿನ?ವಯಸ್ಸಾಗುತ್ತಾ ಬಂದಿದೆ.ಈಗ ನಮ್ಮಜೀವನಕ್ಕೂ ಒಂದು ಆರ್ಥ,ಸುಖ,ಸಂತೋಷ ಬೇಕಲ್ಲವೇ?
ನೆಮ್ಮದಿ ಕೊಡಬಹುದಾದಂತಹ ಸ್ನೇಹಿತನೊಡನಿರುವುದು ತಪ್ಪೇ?ಎಂಬೆಲ್ಲಾ ಆಕೆಯ ಮನದಾಳದ ಪ್ರಶ್ನೆಗಳು.ಮೂರನೆಯ ವ್ಯಕ್ತಿಯ ಮಾತಿಗೆ ಬೆಲೆಕೊಟ್ಟು ಬೆರೆಯವರಿಗಾಗಿ ಇನ್ನೆಷ್ಟು ವರ್ಷ ಜೀವನ ಸಾಗಿಸುವುದು?ಆತ್ಮಸಾಕ್ಷಿಗೆ ಸರಿಯಾಗಿ ನಡೆದರೆ ಸಾಕಲ್ಲವೇ?ಅವರಿಬ್ಬರಲ್ಲೂ ದೈಹಿಕ ಆಕರ್ಷಣೆ ಸಹಜ.ಆದರೆ ಅದಕ್ಕಿಂತ ಹೆಚ್ಚು ಪರಸ್ಪರ ನಾವಿಬ್ಬರೂ ಒಂದು,ನೀನು ನನ್ನವ,ನಾನು ನಿನ್ನವಳು ಎಂಬ ಭಾವನೆ.ಏನೇ ವಿಷಯ ಮಾತನಾಡಲೂ ಯಾವುದೇ ಅಡೆ ತಡೆ ಗಳಿಲ್ಲ.ನಾಚಿಕೆ,ಮುಜುಗರವಿಲ್ಲ.ಅವರಿಬ್ಬರ ಸ್ನೇಹ ಹೀಗೇ ಮುಂದುವರೆಯಲಿ.ಉನ್ನತ ವಿಚಾರಗಳು, ವಿಷಯಗಳ ಚರ್ಚೆ,ಜನೋಪಕಾರಿ ಕೆಲಸ ಕಾರ್ಯಗಳು, ಇವರ ಜೊತೆಗೂಡುವಿಕೆಯ ಸಾಕ್ಷಿಯಾಗಲಿ.
ಆಕೆಯ ನಡೆ,ನುಡಿ.ಬಾಷೆ,ವ್ಯಕ್ತಿತ್ವ,ಓಕೆ ಎನ್ನಬಹುದಾದ ಸೌಂದರ್ಯದಿಂದ ಆತನಿಗೂ ಇಷ್ಟವಾzಳುÀ ಆಕೆ , ಉಪಯುಕ್ತ ಕೆಲಸಗಳನ್ನು ಮಾಡುತ್ತಾ ಸಾಗಲು ಹೊರಟಿರುವ ಪಯಣ.ಅತ್ಯಂತ ಸರಳತೆಯ ಆತನ ಜೀವನ,ಕೆಲಸದಲ್ಲಿ ಶ್ರಧ್ದೆ,ನಿಷ್ಟೆ,ಶಿಸ್ತು,ಎಲ್ಲರನ್ನೂ ಪ್ರೀತಿಸುವ ಹೃದಯ, ಆತನ ಮಾತಿಗೆ,ಕಾರ್ಯ ವೈಖರಿಗೆ,ಭಾಷೆಗೆ,ಭಾಷಣಕ್ಕೆ ಮನಸೋತು ಕಾಡುವ ಹಿಂಡು,ಹಿಂಡು ಜನ,ವಿಷೇಶ ವ್ಯಕ್ತಿ ಅತ!
ನಿನ್ನ ನೋಟ ನನಗೆ ಹಿತ, ನಿನ್ನ ಕಾಣದೆ ಇರೆನು ನಾನು,ಜೊತೆಯಾಗಿರೋಣ,ರೆಕ್ಕೆಯಿದೆಯೆಂಬಂತೆ ಹಾರೋಣ,ನಕ್ಕು ನಲಿಯೋಣ,ಯಾವ ಹಕ್ಕಿಗೇನು ಕಮ್ಮಿ, ಜೊತೆಯಾಗಿ ಹೆಜ್ಜೆಹಾಕೋಣ,ಚರ್ಚಿಸುತ್ತಾ,ಗುರಿ ತಲುಪಲು ತಂತ್ರ ರಚಿಸುತ್ತಾ,ಪ್ರೀತಿ ಮಾಡುತ್ತಾ!ನೀ ನನಗೆ ಕೊಡುವ ನೆಮ್ಮದಿಗೆ ಕೋಟಿ ನಮನಗಳು,ನನ್ನ ಎದೆಯ ಮೇಲೆ ನೀನು,ನಿನ್ನ ಬಿಸಿಯಪ್ಪುಗೆ,ಚಂದದ ತುಟಿಯ ಜೇನು, ದೊರಕೀತೆಂಬ ಆಸೆ, ನನ್ನ ಎದೆ,ಭುಜ ನಿನಗಾಸರೆ ಸದಾ!ನಾ ನಿನ್ನವ ಇಂದೂ,ಎಂದೆಂದೂ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ