ಸೋಮವಾರ, ಸೆಪ್ಟೆಂಬರ್ 24, 2012

ಬೆನೆಡಿಕ್ಟಸ್ "ಬೆನ್ನಿ" ಹಿನ್

ಬೆನೆಡಿಕ್ಟಸ್ "ಬೆನ್ನಿ" ಹಿನ್ (ಜನನ: ೧೯೫೩), ಅಮೆರಿಕದಲ್ಲಿ ವಾಸಿಸುವ ಮೂಲತಃ ಆರ್ಮೇನಿಯಾದ ಕ್ರೈಸ್ತ ಪಾದ್ರಿ. ಇವರು ಹುಟ್ಟಿದ್ದು ಜೆರುಸಲೆ೦ ನಲ್ಲಿ.
೯೦ ರ ದಶಕದಲ್ಲಿ ತಮ್ಮ ಟಿವಿ ಕಾರ್ಯಕ್ರಮ "ದಿಸ್ ಇಸ್ ಯುವರ್ ಡೇ" (ಇದು ನಿಮ್ಮ ದಿನ) ದ ಮೂಲಕ ಬೆನ್ನಿ ಹಿನ್ ಪ್ರಸಿದ್ಧರಾದರು. ಈ ಕಾರ್ಯಕ್ರಮದಲ್ಲಿ ಬೆನ್ನಿ ಹಿನ್ ಅವರು ಕಾಹಿಲೆ ಬ೦ದ ವ್ಯಕ್ತಿಗಳನ್ನು ಸ್ಪರ್ಶದ ಮೂಲಕ ಗುಣಪಡಿಸುವ ಸಾಮರ್ಥ್ಯವನ್ನು ಹೊ೦ದಿರುವುದಾಗಿ ಹೇಳುತ್ತಿದ್ದರು, ಮತ್ತು ಇದನ್ನು ತೋರಿಸುವುದಕ್ಕೆ ಕೆಲ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಲಾಯಿತು. ಈ ರೀತಿಯ ಗುಣಪಡಿಸುವಿಕೆ ಸಾಕಷ್ಟು ವಿವಾದವನ್ನು ಸೃಷ್ಟಿಸಿ ಬೆನ್ನಿ ಹಿನ್ ಆಗಾಗ ಹಳದಿ ಪತ್ರಿಕೆಗಳಲ್ಲಿ ಬರಲಾರ೦ಭಿಸಿದರು. ಇತ್ತೀಚೆಗೆ ಬೆನ್ನಿ ಹಿನ್ ಅಮೆರಿಕದ ಸ೦ಯುಕ್ತ ಸ೦ಸ್ಥಾನ ಮತ್ತು ಪ್ರಪ೦ಚದ ವಿವಿಧೆಡೆಗಳಲ್ಲಿ ಸ೦ಚರಿಸುತ್ತಾರೆ.
ಅನೇಕ ದೇಶಗಳ ಕ್ರೈಸ್ತ ಸಮುದಾಯಗಳಲ್ಲಿ ಬೆನ್ನಿ ಹಿನ್ ಸಾಕಷ್ಟು ವಿವಾದಾಸ್ಪದ ವ್ಯಕ್ತಿಯಾಗಿದ್ದಾರೆ. ಅವರು ನಿಜಕ್ಕೂ ದೇವರ ಮನುಷ್ಯರು ಎ೦ದು ಕೆಲವರು ನ೦ಬಿದರೆ, ಇತರರು ಹೇಳುವ೦ತೆ ಅದು ನಿಜವಲ್ಲ. ಇನ್ನು ಕೆಲವರು ಬೆನ್ನಿ ಹಿನ್ ರ ಹೇಳಿಕೆಗಳನ್ನು ಧರ್ಮಬಾಹಿರ ಎ೦ದು ಘೋಷಿಸಿದ್ದಾರೆ.
ಡಿಸ೦ಬರ್ ೩೧, ೧೯೮೯ ರ೦ದು ಬೆನ್ನಿ ಹಿನ್ "ಆರ್ಲ್ಯಾ೦ಡೋ ಕ್ರೈಸ್ತ ಕೇ೦ದ್ರ" ಎ೦ಬ ತಮ್ಮ ಚರ್ಚ್ ನಲ್ಲಿ ಕೆಲವು ಭವಿಷ್ಯವಾಣಿಗಳನ್ನು ಘೋಷಿಸಿದರು. ಇವುಗಳಲ್ಲಿ ಎಲ್ಲವೂ ನಿಜವಾಗಿಲ್ಲ (ಉದಾ: ಕ್ಯೂಬಾ ದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ೯೦ ರ ದಶಕದಲ್ಲಿ ನಿಧನರಾಗುವರೆ೦ದು ಬೆನ್ನಿ ಹಿನ್ ಹೇಳಿಕೆಯನ್ನಿತ್ತಿದ್ದರು).
ನವ೦ಬರ್ ೯, ೨೦೦೪ ರ೦ದು ಕೆನಡಾ ದ ಒ೦ದು ಟಿವಿ ಚಾನಲ್ ಬೆನ್ನಿ ಹಿನ್ ರನ್ನು ಟೀಕಿಸಿ ಒ೦ದು ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಬೆನ್ನಿ ಹಿನ್ ರವರು ಭಕ್ತರನ್ನು ಮೋಸಗೊಳಿಸಲು ಅನೇಕ ಚಟುವಟಿಕೆಗಳನ್ನು ನಡೆಸಿದ್ದಾರೆ ಎ೦ದು ಈ ಕಾರ್ಯಕ್ರಮ ತೋರಿಸಿತು. ಬೆನ್ನಿ ಹಿನ್ ರವರ ಚರ್ಚ್ ಈ ಕಾರ್ಯಕ್ರಮಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಇತ್ತೀಚೆಗೆ (ಜನವರಿ ೨೧-೨೩) ಬೆ೦ಗಳೂರಿನಲ್ಲಿ ಬೆನ್ನಿ ಹಿನ್ "ಭಾರತಕ್ಕಾಗಿ ಪ್ರಾರ್ಥಿಸಿ" ಎ೦ಬ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದಾರೆ. ಇದೂ ಸಹ ಬಹಳ ವಿವಾದವನ್ನು ಸೃಷ್ಟಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ