ಸೋಮವಾರ, ಸೆಪ್ಟೆಂಬರ್ 24, 2012

ಹಳೆ ಪ್ರೇಮಿ ಎದುರಾದರೆ

ಹಳೆ ಪ್ರೇಮಿ ಎದುರಾದರೆ
ಹಳೆ ಪ್ರೇಮಿ ಇನ್ಯಾವತ್ತೂ ಎದುರಾಗದೇ ಇರಲಿ ಅಂತೆಲ್ಲ ಜಪಿಸುವಾಗ ಆಕಸ್ಮಿಕವಾಗಿ ಎದುರಾದರೆ ಹೇಗಾಗಬೇಡ? ನಿರೀಕ್ಷೆ ಇಲ್ಲದೆಯೇ ಇದ್ದಕ್ಕಿದ್ದಂತೆ ಎದುರಾದವನ ಎದುರು ನಿಂತಾಗ ಮೈಯೆಲ್ಲ ಬೆವತು ಹೋದಂತಾಗಿ ಭಯದಿಂದ ಹೃದಯ ಮತ್ತಷ್ಟು ಬಡಿದುಕೊಂಡಂಥ ಅನುಭವ. ನೋಟವೇ ಭಯ ಬೀಳಿಸಿರುವಾಗ ಮಾತನಾಡುವ ಆಸಕ್ತಿ ಉಳಿದಿರುವುದಿಲ್ಲ. ಪಕ್ಕದಲ್ಲಿರುವ ಪತಿ ಅದೇನು ಅಂದುಕೊಂಡಾನೋ ಅನ್ನುವ ಭಯದಿಂದಲೇ ಮುಖ ತಿರುವಿಕೊಂಡು ಹೋಗುವವಳ ಬಗ್ಗೆ ಹಳೆ ಪ್ರೇಮಿಗೆ ಅಸಮಾಧಾನ.

ಬಿಟ್ಟಿರಲು ಅಸಾಧ್ಯ ಅನ್ನುವಷ್ಟು ಹತ್ತಿರವಾದಾಗ ಇದೀಗ ಅಪರಿಚಿತ ನೋಟ ಬೀರಿ ಹೋದ ಹುಡುಗಿಯ ಬಗ್ಗೆ ಮತ್ತಷ್ಟು ಕೋಪ. ಸೌಜನ್ಯಕ್ಕೂ ಮಾತನಾಡಿದವಳ ಬಗ್ಗೆ ಸೇಡು ತೀರಿಸಿಕೊಳ್ಳುವ ಭಾವ. ಇಲ್ಲಸಲ್ಲದ್ದನ್ನು ಪ್ರಚಾರ ಮಾಡುವ ತನಕ ಹೋಗುತ್ತಾನೆ ಅಥವಾ ಮನಸ್ಸಲ್ಲೇ ಕೊರಗಬಹುದು.

ಕಾರಣ ಏನೇ ಇರಲಿ, ಆದರೆ ಅದು ಮುರಿದು ಬಿದ್ದಿದೆ ಅಂತಾದ ಮೇಲೆ ಮುಗೀತು ಅದರ ಆಯುಷ್ಯ. ಬಿಟ್ಬಿಡಿ ಅದನ್ನ. ಮತ್ತೇ ಮತ್ತೆ ಕೊರಗಿದರೆ ಅಥವಾ ಚಿಕ್ಕದೊಂದು ಗಿಲ್ಟ್ ಕಾಡುತ್ತಿದ್ದರೆ ನಿಮ್ಮ ಮುಂದಿನ ಬದುಕಿನ ಸುಂದರ ಕ್ಷಣಗಳನ್ನು ಕಳೆದುಕೊಳ್ಳುತ್ತೀರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ