ಮಂಗಳವಾರ, ಸೆಪ್ಟೆಂಬರ್ 25, 2012

Friends..ಧೈರ್ಯಗೆಡಬೇಡಿ ಹೊಸದಾಗಿ ಆರಂಬಿಸಿ...

ಧೈರ್ಯಗೆಡಬೇಡಿ ಹೊಸದಾಗಿ ಆರಂಬಿಸಿ

ಪ್ರಯತ್ನ ಮಾಡಿಯೂ ಯೆಶಸ್ಸುಸಿಗದೇ ಹೋದರೆ ನಿರಾಶೆಪಡಬೇಡಿ
ಇದರ ಬದಲು ..
21 ವರ್ಷದಲ್ಲಿ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ದಿಸಿ
ಸೋತ ವ್ಯಕ್ತಿಯನ್ನು ನೆನಪಿಸಿಕೊಳ್ಳಿ.
22 ವರ್ಷದಲ್ಲಿ ಮದುವೆಯಾದ ಆದರೆ ಅಲ್ಲೂ ಅಪಯೇಶಸ್ಸು.
24ವರ್ಷದಲ್ಲಿ ಉದ್ಯೋಗಮಾಡಲು ಪ್ರಯತ್ನಪಟ್ಟ ಅಲ್ಲೂ ಸೋತ.
27 ವರ್ಷದಲ್ಲಿ ಪತ್ನಿಗೆ ವಿಚ್ಛೇದನ ನೀಡಿದ.
32 ವರ್ಷದಲ್ಲಿ ಲೋಕಸಭೆಗೆ (ಸಂಸತ್ತು) ಚುನಾವಣೆಗೆ ಸ್ಪರ್ದಿಸಿ ಅಲ್ಲೂ ಅವನಿಗೆ ಸೋಲು.
37 ವರ್ಷದಲ್ಲಿ ಕಾಂಗ್ರೆಸ ನ ಸೆನೆಟ್ ಸ್ಥಾನಕ್ಕಾಗಿ  ಸ್ಪರ್ದಿಸಿದ ಅಲ್ಲೂ ನಿರಾಶೆ..
42 ವರ್ಷದಲ್ಲಿ ಸಂಸದನ ಸ್ತಾನಕ್ಕೆ ಸ್ಪರ್ದೆ ಪುನಃ ಸೋಲು.
47 ವರ್ಷದಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ದೆ ಮತ್ತೆ ಅದೇ ಸೋಲು.
ಆದರೆ ವ್ಯಕ್ತಿ 51 ವರ್ಷದಲ್ಲಿ ಅಮೆರಿಕ ದೇಶದ ರಾಷ್ಟ್ರಪತಿಯಾದ ಆತನ ಹೆಸರು ಅಬ್ರಹಾಂ ಲಿಂಕನ್..
.ಧೈರ್ಯಗೆಡಬೇಡಿ ಹೊಸದಾಗಿ ಆರಂಬಿಸಿ..ಯೆಶಸ್ಸು ನಿಮದೇ ಆಗುತೆ ..ನಿಶ್ಚಿತ ..
ಇಂತಿ
ನಿಮ್ಮ ನಾರಾಯಣಗೌಡ

ಸೋಮವಾರ, ಸೆಪ್ಟೆಂಬರ್ 24, 2012

ಸುಲಭವಲ್ಲ ಅನ್ನುವುದನ್ನು ಬಿಟ್ಬಿಡಿ

ಸುಲಭವಲ್ಲ ಅನ್ನುವುದನ್ನು ಬಿಟ್ಬಿಡಿ
ಮುರಿದು ಬಿದ್ದ ಪ್ರೇಮ ಮರೆಯೋದು ಅಷ್ಟೊಂದು ಸುಲಭವಲ್ಲ. ಹಾಗಂತ ಎಷ್ಟು ದಿನ ಅಂತ ಅದರ ನೆನಪಲ್ಲೇ ಮರುಗುತ್ತೀರ? ನೆನಪು ಮಾಡಿಕೊಳ್ಳಬೇಡಿ ಅಷ್ಟೆ. ಹಳೆ ಪ್ರೇಮಿ ಜತೆ ನಿಮ್ಮ ಸಂಗಾತಿ ಹೋಲಿಸುವ ಕೆಟ್ಟಗುಣ ಬಿಟ್ಟುಬಿಡಿ. ವಿಪರೀತ ಗೊಂದಲ ಉಂಟಾಗುತ್ತಿದ್ದರೆ ಇತರೇ ಕೆಲಸಗಳಲ್ಲಿ ಬ್ಯೂಸಿಯಾಗಿರಿ. ಧ್ಯಾನ ಮಾಡಿ.

ಹಳೆ ಪ್ರೇಮಿ ಎದುರಾದರೆ

ಹಳೆ ಪ್ರೇಮಿ ಎದುರಾದರೆ
ಹಳೆ ಪ್ರೇಮಿ ಇನ್ಯಾವತ್ತೂ ಎದುರಾಗದೇ ಇರಲಿ ಅಂತೆಲ್ಲ ಜಪಿಸುವಾಗ ಆಕಸ್ಮಿಕವಾಗಿ ಎದುರಾದರೆ ಹೇಗಾಗಬೇಡ? ನಿರೀಕ್ಷೆ ಇಲ್ಲದೆಯೇ ಇದ್ದಕ್ಕಿದ್ದಂತೆ ಎದುರಾದವನ ಎದುರು ನಿಂತಾಗ ಮೈಯೆಲ್ಲ ಬೆವತು ಹೋದಂತಾಗಿ ಭಯದಿಂದ ಹೃದಯ ಮತ್ತಷ್ಟು ಬಡಿದುಕೊಂಡಂಥ ಅನುಭವ. ನೋಟವೇ ಭಯ ಬೀಳಿಸಿರುವಾಗ ಮಾತನಾಡುವ ಆಸಕ್ತಿ ಉಳಿದಿರುವುದಿಲ್ಲ. ಪಕ್ಕದಲ್ಲಿರುವ ಪತಿ ಅದೇನು ಅಂದುಕೊಂಡಾನೋ ಅನ್ನುವ ಭಯದಿಂದಲೇ ಮುಖ ತಿರುವಿಕೊಂಡು ಹೋಗುವವಳ ಬಗ್ಗೆ ಹಳೆ ಪ್ರೇಮಿಗೆ ಅಸಮಾಧಾನ.

ಬಿಟ್ಟಿರಲು ಅಸಾಧ್ಯ ಅನ್ನುವಷ್ಟು ಹತ್ತಿರವಾದಾಗ ಇದೀಗ ಅಪರಿಚಿತ ನೋಟ ಬೀರಿ ಹೋದ ಹುಡುಗಿಯ ಬಗ್ಗೆ ಮತ್ತಷ್ಟು ಕೋಪ. ಸೌಜನ್ಯಕ್ಕೂ ಮಾತನಾಡಿದವಳ ಬಗ್ಗೆ ಸೇಡು ತೀರಿಸಿಕೊಳ್ಳುವ ಭಾವ. ಇಲ್ಲಸಲ್ಲದ್ದನ್ನು ಪ್ರಚಾರ ಮಾಡುವ ತನಕ ಹೋಗುತ್ತಾನೆ ಅಥವಾ ಮನಸ್ಸಲ್ಲೇ ಕೊರಗಬಹುದು.

ಕಾರಣ ಏನೇ ಇರಲಿ, ಆದರೆ ಅದು ಮುರಿದು ಬಿದ್ದಿದೆ ಅಂತಾದ ಮೇಲೆ ಮುಗೀತು ಅದರ ಆಯುಷ್ಯ. ಬಿಟ್ಬಿಡಿ ಅದನ್ನ. ಮತ್ತೇ ಮತ್ತೆ ಕೊರಗಿದರೆ ಅಥವಾ ಚಿಕ್ಕದೊಂದು ಗಿಲ್ಟ್ ಕಾಡುತ್ತಿದ್ದರೆ ನಿಮ್ಮ ಮುಂದಿನ ಬದುಕಿನ ಸುಂದರ ಕ್ಷಣಗಳನ್ನು ಕಳೆದುಕೊಳ್ಳುತ್ತೀರ.

'ನಿನ್ನಾಣೆಗೂ ಇಲ್ಲ

  'ನಿನ್ನಾಣೆಗೂ ಇಲ್ಲ

ಮದುವೆಗೂ ಮುಂಚೆ ಯಾರನ್ನೂ ಪ್ರೀತಿಸಲಿಲ್ಲವಾ? ಪದೇಪದೆ ಅಂವ ಕೇಳಿದಾಗಲೆಲ್ಲ 'ನಿನ್ನಾಣೆಗೂ ಇಲ್ಲ 'ಎಂದವಳು ಪುನಃ ಮಾತು ಮುಂದುವರೆಸುವುದಿಲ್ಲ. ಮೌನವಾಗಿ ಬಿಡುತ್ತಾಳೆ ಅವಳು.

ಆ ಮೌನದಲ್ಲಿ ಅದೇನೋ ಗುಟ್ಟು ಇದೆ ಅಂತೆಲ್ಲ ಅನುಮಾನಪಡುವಷ್ಟು ಅಂವ ಸಿಲ್ಲಿಯಲ್ಲ. ಬೆಟ್ಟದಂಥ ಪ್ರೀತಿ ಹೊತ್ತು ಅವಳಿಗಾಗಿ ಬದುಕು ಅನ್ನುವಷ್ಟು ಅಂವ ಭಾವುಕನಾಗುತ್ತಾನೆ. ಆತನ ಪ್ರೀತಿಯಲ್ಲಿ ಕಳೆದು ಹೋಗಬೇಕು ಅಂದುಕೊಂಡಾಗೆಲ್ಲ ಮತ್ತದೇ ಹಳೆಯ ಪ್ರೇಮಿ ನೆನಪು ಜೀವ ಹಿಂಡಿ ಬಿಡುತ್ತದೆ. ಅದ್ಯಾವುದೋ ಅಪರಾ ಭಾವ, ಇನ್ಯಾವುದೋ ತಳಮಳ ಅವಳನ್ನು ಹೊಸ ಬದುಕಿಗೆ ಹೊಂದಿಕೊಳ್ಳಲು ಬಿಡುವುದಿಲ್ಲ.

ಎಲ್ಲವನ್ನೂ ಹೇಳಿ ಬಿಡಬೇಕು ಅಂದೆನಿಸಿದರೂ ಆತ ಏನಂದುಕೊಳ್ಳುವನೋ ಅನ್ನುವ ಭಯ. ಇದೇ ಭಯ ಜೀವನಪೂರ್ತಿ ಕಾಡಿ ಬಿಡುತ್ತದೆ. ವಿಪರೀತ ಪ್ರೀತಿಸುವ ಪತಿಗೆ ಮೋಸ ಮಾಡಿದನೇನೋ ಅನ್ನೋ ಗಿಲ್ಟ್ ಜತೆಗಿಟ್ಟುಕೊಂಡೇ ಹೇಗೋ ಎಲ್ಲವನ್ನು ಮರೆಯಲು ಪ್ರಯತ್ನಿಸುತ್ತಾಳೆ.

ಕಾಣದ ಪ್ರೀತಿ'

ಕಾಣದ ಪ್ರೀತಿ'

ಕಾಣದಂತ ಅವಳ ಆ ಪ್ರೀತಿಯು,
ದೂರದಿಂದ ಕೈ ಚಾಚಿದೇ.

ನೋಡಲು ನಾ ಹೋದರೆ,
ಅವಳ ಉಸಿರಿನ ತಂಗಾಳಿಗೆ ನನ್ನೇ ಮರೆತು...
ಮೈ ಮರೆಯುವೆ.

ಕಣ್ ಮುಚ್ಚಿ ನಾ ಸವೆಯೋ ಆ ಪ್ರೀತಿ ಸೊಗಸಾಗಿದೆ.

ಎದೆಯಲ್ಲಿರೋ ಅವಳೊಲವು ನನ್ನನೀಗ ಬಾ ಎಂದಿದೆ.

ಮರೆಯಾಗಿ ಕಾಡುವ ಅವಳ್ಯಾರೋ ನಾ ಕಾಣೇನೆ.

ಕಾಣದೆ ಇರುವ ಆ ಪ್ರೀತಿಯು ನನ್ನನೀಗ ಅವಳಲಿ ಸೆರೆಮಾಡಿದೆ.

ಸೆರೆಹೂದೇನು ಕಾಣದ ಆ ಪ್ರೀತಿಗೆ.....................

ಪ್ರೀತಿ ಎಂದರೇನು?ಬೇಕು ಪ್ರೀತಿ.

ಪ್ರೀತಿ,ಪ್ರೇಮ,ಸ್ನೇಹ,ಹೊಂದಾಣಿಕೆ,ಆತ್ಮೀಯತೆ,ಪರಸ್ಪರ ವಿಶ್ವಾಸ,ನಂಬಿಕೆ....ಇವೆಲ್ಲಾ ಇದ್ದಲ್ಲಿ ಜೀವನ ಎಷ್ಟು ಮಧುರ!
ಕೆಲವರನ್ನು ಕಂಡೊಡನೆ ಏನೋ ಆತ್ಮೀಯತೆ,ಒಲವು,ನಮ್ಮವರು ಎಂಬ ಭಾವನೆ.ಅವರಿಗಾಗಿ ಮಿಡಿಯುವ ಮನ,ಬಡಿಯುವ ಹೃದಯ,ಭಾವನೆಗಳ ಮಹಾಪೂರ.ನನ್ನವನು,ನನ್ನವಳು ಎಂಬ ಭಾವನೆ.
ಕೆಲವೇ ದಿನಗಳಲ್ಲಿ ಆತ ಆಕೆಯ ಮನಕ್ಕೆ ಹತ್ತಿರವಾಗಿದ್ದ.ಐ ಮಿಸ್ ಯು, ಐ ಲವ್ ಯು, ಎಂದು ಪದಗಳ ವಿನಿಮಯವಾಗಲು ಶುರು.ಏನಿದು ಲವ್? ಎಷ್ಟು ಸುಲಭವಾಗಿ ಎಲ್ಲರೂ ಈ ಪದ ಬಳಕೆಮಾಡುತ್ತಾರಲ್ಲ?ಆತನ ಪ್ರಕಾರ
ಲವ್ ಎಂದರೆ ಸಂತೋಷ ಹಾಗೂ ನೆಮ್ಮದಿ ಅಥವಾ ಸಮಾಧಾನ .ಯಾರಿಂದ ಇದು ದೊರಕುವುದೋ ಅವರಿಗೆ ಐ ಲವ್ ಯು.ಎನ್ನುತ್ತೇವೆ. ಎóಷ್ಟು ಚೆಂದಾದ ಉತ್ತರ.ಪ್ರೀತಿ ಎಲ್ಲರ ಜೀವನದಲ್ಲಿ ಅತ್ಯವಶ್ಯಕ.ಆರೋಗ್ಯಕ್ಕೂ ಮುಖ್ಯ.ಆದರೆ ಈಗಿನ ಕಾಲದಲ್ಲಿ ಅದು ದೊರೆಯುವುದಾದರೂ ಎಲ್ಲಿಂದ?ಗಂಡ ಹೆಂಡತಿ ಸಂಸಾರದ ಹೊಣೆ,ತಾಪತ್ರಯ ಇವುಗಳಲ್ಲೇ ಮುಳುಗಿ, ಕೆಲವೊಮ್ಮೆ ವಾದ,ವಿವಾದ,ಚರ್ಚೆ,ಮುನಿಸು,ಜಗಳ,ಜವಾಬ್ದಾರಿ,ಮಕ್ಕಳು,ಮನೆ,ಸಾಲ ಇವುಗಳಿಗೇ ತಮ್ಮ ಜೀವನವನ್ನು ಮುಡಿಪಾಗಿಸುತ್ತಾರೆ.ತಮಗಾಗಿ?ಸಮಯ?ಪ್ರೀತಿ ಸಂತೋಷದ ರಸ ನಿಮಿóಷಗಳು?ಇವೆಲ್ಲಾ ನಿರ್ಲಕ್ಷ್ಯಗೊಂಡ,ಮೂಲೆಗಿರಿಸಿದ ಮೌಲ್ಯಗಳು.
ನಮ್ಮ ಸಂಗಾತಿಯೊಡನೆ ನಮಗೆ ಸಂಪೂರ್ಣ ಭಾವನಾತ್ಮಕ ಸಂತೃಪ್ತಿ ದೊರೆತಿರಬಹುದು ಅಥವಾ ಸ್ವಲ್ಪ ಕೊರತೆಯಾಗಿರಬಹುದು.ಅತ್ಯಂತ ಆತ್ಮೀಯವಾದ,ಪ್ರಿಯವಾದ ಸ್ನೇಹಿತ,ಸ್ನೇಹಿತೆಯ ಮೂಲಕ ಅದು ದೊರೆಯುವುದು. ಆದರೆ ಇದು ಎóಷ್ಟು ಜನರಿಗೆ ಲಭ್ಯ?ಅವರಿಬ್ಬರೂ ಸ್ನೇಹಿತರಾಗಿ,ಭಾವನೆಗಳು,ಮನಸ್ಸು ಹೊಂದಾಣಿಕೆಯಾಗಿ ಪರಸ್ಪರ  ಆಕರ್ಷಿತರಾಗಿ ಎರಡು ದೇಹ,ಒಂದೇ ಮನಸ್ಸು ಎಂಬಂತಾಗಿದ್ದು ಕೆಲವೇ ದಿನಗಳಲ್ಲಿ.ಆತ ಅಕೆಗೆ ತೋರುತ್ತಿದ್ದ ಪ್ರೀತಿ,ಗೌರವ,ಮಾರ್ಗದರ್ಶನ,ಸಹಕಾರ,ಮೆಚ್ಚುಗೆ,ಒಲವು,ಪ್ರತಿ ಹಂತದಲ್ಲೂ ಆಕೆಯನ್ನು ಕೈಹಿಡಿದು ನಡೆಸುವ ರೀತಿಗೆ ಆಕೆ ಸಂಪೂರ್ಣ ಮಾರುಹೋಗಿದ್ದಳು.ಎಂದೂ,ಒಮ್ಮೆಯೂ ಸಿಡುಕದ,ಸಿಟ್ಟಾಗದ ಆತನ ವ್ಯಕ್ತಿತ್ವ ಸವಾಲಾಗಿತ್ತು.ಆತನಿಂದ ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ ಎಂಬುದನ್ನರಿತಳು.ಆತನ ಮಾತಿಗೆ,ಪ್ರೀತಿಗೆ ಮಾರುಹೋಗಿ ಗಂಟೆಗಟ್ಟಲೆ ಜೊತೆಯಾಗಿ ಕುಳಿತು ಪರಸ್ಪರ ಮುಖಾಮುಕಿ,ಮಾತನಾಡುತ್ತಾ ಕಳೆದ ಸಮಯವೆಷ್ಟೋ?ಕಲಿತ ವಿಷಯಗಳೆಷ್ಟೋ?ವೃತ್ತಿ ಬೇರೆ,ಭಾಷೆ ಬೇರೆಯಾದರೇನು?ನೋಟ,ನಗು,ಮೌನ,ಕಂಗಳು,ಸ್ಪರ್ಷ ಇವು ಮನದಾಳದ ಇಂಗಿತ,ಭಾವನೆ,ಇಚ್ಚೆ ಎಲ್ಲವನ್ನೂ ರವಾನಿಸುವ,ಅರ್ಥೈಸುವ ಸೇತುವೆಗಳಾಗಿದ್ದವು.ನನಗಾಗಿ ನೀನು,ನಿನಗಾಗಿ ನಾನು ಎಂಬಂತೆ ಎರಡು ಹೃದಯಗಳೂ ಲಯಬಧ್ದವಾಗಿ ಹಾಡುತ್ತಾ,ಬಡಿಯುತ್ತಾ,ಸಂತೋಷದ ಅಲೆಗಳನ್ನು ತೇಲಿ ಬಿಡುತ್ತಾ,ಹೆಜ್ಜೆಹೆಜ್ಜೆಗೂ ಜೊತೆಯಾಗಿ,ನಗುವಿನ ತರಂಗಗಳು ಒಂದಾಗಿ,ಸುಮಧುರ ಕಂಠಗಳು ಹಕ್ಕಿಗಳ ಚಿಲಿಪಿಲಿಗೆ ಸವಾಲಾಗುತ್ತಿದ್ದಂತೆ ,ಎದುರು ಬಂದ ಅಲೆಗಳೆಷ್ಟೋ?ಎಲ್ಲೇ ಇರು,ಹೇಗೇ ಇರು ಎಂದೆಂದಿಗೂ ನಾನು ನಿನ್ನವನು ಎಂದು ಆಕೆಯ ಕೈಗೆ ಮುತ್ತಿಟ್ಟು ಆತ ಕೊಟ್ಟ ಭಾಷೆ,ಎಂದೆಂದಿಗೂ ನಿಜವೆಂಬುದು ಆಕೆಗೆ ಗೊತ್ತು.ಜೀವನ ಇನ್ನೆಷ್ಡು ದಿನ?ವಯಸ್ಸಾಗುತ್ತಾ ಬಂದಿದೆ.ಈಗ ನಮ್ಮಜೀವನಕ್ಕೂ ಒಂದು ಆರ್ಥ,ಸುಖ,ಸಂತೋಷ ಬೇಕಲ್ಲವೇ?
ನೆಮ್ಮದಿ ಕೊಡಬಹುದಾದಂತಹ ಸ್ನೇಹಿತನೊಡನಿರುವುದು ತಪ್ಪೇ?ಎಂಬೆಲ್ಲಾ ಆಕೆಯ ಮನದಾಳದ ಪ್ರಶ್ನೆಗಳು.ಮೂರನೆಯ ವ್ಯಕ್ತಿಯ ಮಾತಿಗೆ ಬೆಲೆಕೊಟ್ಟು ಬೆರೆಯವರಿಗಾಗಿ ಇನ್ನೆಷ್ಟು ವರ್ಷ ಜೀವನ ಸಾಗಿಸುವುದು?ಆತ್ಮಸಾಕ್ಷಿಗೆ ಸರಿಯಾಗಿ ನಡೆದರೆ ಸಾಕಲ್ಲವೇ?ಅವರಿಬ್ಬರಲ್ಲೂ ದೈಹಿಕ ಆಕರ್ಷಣೆ ಸಹಜ.ಆದರೆ ಅದಕ್ಕಿಂತ ಹೆಚ್ಚು ಪರಸ್ಪರ ನಾವಿಬ್ಬರೂ ಒಂದು,ನೀನು ನನ್ನವ,ನಾನು ನಿನ್ನವಳು ಎಂಬ ಭಾವನೆ.ಏನೇ ವಿಷಯ ಮಾತನಾಡಲೂ ಯಾವುದೇ ಅಡೆ ತಡೆ ಗಳಿಲ್ಲ.ನಾಚಿಕೆ,ಮುಜುಗರವಿಲ್ಲ.ಅವರಿಬ್ಬರ ಸ್ನೇಹ ಹೀಗೇ ಮುಂದುವರೆಯಲಿ.ಉನ್ನತ ವಿಚಾರಗಳು, ವಿಷಯಗಳ ಚರ್ಚೆ,ಜನೋಪಕಾರಿ ಕೆಲಸ ಕಾರ್ಯಗಳು, ಇವರ ಜೊತೆಗೂಡುವಿಕೆಯ ಸಾಕ್ಷಿಯಾಗಲಿ.
ಆಕೆಯ ನಡೆ,ನುಡಿ.ಬಾಷೆ,ವ್ಯಕ್ತಿತ್ವ,ಓಕೆ ಎನ್ನಬಹುದಾದ ಸೌಂದರ್ಯದಿಂದ ಆತನಿಗೂ ಇಷ್ಟವಾzಳುÀ ಆಕೆ , ಉಪಯುಕ್ತ ಕೆಲಸಗಳನ್ನು ಮಾಡುತ್ತಾ ಸಾಗಲು ಹೊರಟಿರುವ ಪಯಣ.ಅತ್ಯಂತ ಸರಳತೆಯ ಆತನ ಜೀವನ,ಕೆಲಸದಲ್ಲಿ ಶ್ರಧ್ದೆ,ನಿಷ್ಟೆ,ಶಿಸ್ತು,ಎಲ್ಲರನ್ನೂ ಪ್ರೀತಿಸುವ ಹೃದಯ, ಆತನ ಮಾತಿಗೆ,ಕಾರ್ಯ ವೈಖರಿಗೆ,ಭಾಷೆಗೆ,ಭಾಷಣಕ್ಕೆ ಮನಸೋತು ಕಾಡುವ ಹಿಂಡು,ಹಿಂಡು ಜನ,ವಿಷೇಶ ವ್ಯಕ್ತಿ ಅತ!
ನಿನ್ನ ನೋಟ ನನಗೆ ಹಿತ, ನಿನ್ನ ಕಾಣದೆ ಇರೆನು ನಾನು,ಜೊತೆಯಾಗಿರೋಣ,ರೆಕ್ಕೆಯಿದೆಯೆಂಬಂತೆ ಹಾರೋಣ,ನಕ್ಕು ನಲಿಯೋಣ,ಯಾವ ಹಕ್ಕಿಗೇನು ಕಮ್ಮಿ, ಜೊತೆಯಾಗಿ ಹೆಜ್ಜೆಹಾಕೋಣ,ಚರ್ಚಿಸುತ್ತಾ,ಗುರಿ ತಲುಪಲು ತಂತ್ರ ರಚಿಸುತ್ತಾ,ಪ್ರೀತಿ ಮಾಡುತ್ತಾ!ನೀ ನನಗೆ ಕೊಡುವ ನೆಮ್ಮದಿಗೆ ಕೋಟಿ ನಮನಗಳು,ನನ್ನ ಎದೆಯ ಮೇಲೆ ನೀನು,ನಿನ್ನ ಬಿಸಿಯಪ್ಪುಗೆ,ಚಂದದ ತುಟಿಯ ಜೇನು, ದೊರಕೀತೆಂಬ ಆಸೆ, ನನ್ನ ಎದೆ,ಭುಜ ನಿನಗಾಸರೆ ಸದಾ!ನಾ ನಿನ್ನವ ಇಂದೂ,ಎಂದೆಂದೂ!!!

ಬೆನೆಡಿಕ್ಟಸ್ "ಬೆನ್ನಿ" ಹಿನ್

ಬೆನೆಡಿಕ್ಟಸ್ "ಬೆನ್ನಿ" ಹಿನ್ (ಜನನ: ೧೯೫೩), ಅಮೆರಿಕದಲ್ಲಿ ವಾಸಿಸುವ ಮೂಲತಃ ಆರ್ಮೇನಿಯಾದ ಕ್ರೈಸ್ತ ಪಾದ್ರಿ. ಇವರು ಹುಟ್ಟಿದ್ದು ಜೆರುಸಲೆ೦ ನಲ್ಲಿ.
೯೦ ರ ದಶಕದಲ್ಲಿ ತಮ್ಮ ಟಿವಿ ಕಾರ್ಯಕ್ರಮ "ದಿಸ್ ಇಸ್ ಯುವರ್ ಡೇ" (ಇದು ನಿಮ್ಮ ದಿನ) ದ ಮೂಲಕ ಬೆನ್ನಿ ಹಿನ್ ಪ್ರಸಿದ್ಧರಾದರು. ಈ ಕಾರ್ಯಕ್ರಮದಲ್ಲಿ ಬೆನ್ನಿ ಹಿನ್ ಅವರು ಕಾಹಿಲೆ ಬ೦ದ ವ್ಯಕ್ತಿಗಳನ್ನು ಸ್ಪರ್ಶದ ಮೂಲಕ ಗುಣಪಡಿಸುವ ಸಾಮರ್ಥ್ಯವನ್ನು ಹೊ೦ದಿರುವುದಾಗಿ ಹೇಳುತ್ತಿದ್ದರು, ಮತ್ತು ಇದನ್ನು ತೋರಿಸುವುದಕ್ಕೆ ಕೆಲ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಲಾಯಿತು. ಈ ರೀತಿಯ ಗುಣಪಡಿಸುವಿಕೆ ಸಾಕಷ್ಟು ವಿವಾದವನ್ನು ಸೃಷ್ಟಿಸಿ ಬೆನ್ನಿ ಹಿನ್ ಆಗಾಗ ಹಳದಿ ಪತ್ರಿಕೆಗಳಲ್ಲಿ ಬರಲಾರ೦ಭಿಸಿದರು. ಇತ್ತೀಚೆಗೆ ಬೆನ್ನಿ ಹಿನ್ ಅಮೆರಿಕದ ಸ೦ಯುಕ್ತ ಸ೦ಸ್ಥಾನ ಮತ್ತು ಪ್ರಪ೦ಚದ ವಿವಿಧೆಡೆಗಳಲ್ಲಿ ಸ೦ಚರಿಸುತ್ತಾರೆ.
ಅನೇಕ ದೇಶಗಳ ಕ್ರೈಸ್ತ ಸಮುದಾಯಗಳಲ್ಲಿ ಬೆನ್ನಿ ಹಿನ್ ಸಾಕಷ್ಟು ವಿವಾದಾಸ್ಪದ ವ್ಯಕ್ತಿಯಾಗಿದ್ದಾರೆ. ಅವರು ನಿಜಕ್ಕೂ ದೇವರ ಮನುಷ್ಯರು ಎ೦ದು ಕೆಲವರು ನ೦ಬಿದರೆ, ಇತರರು ಹೇಳುವ೦ತೆ ಅದು ನಿಜವಲ್ಲ. ಇನ್ನು ಕೆಲವರು ಬೆನ್ನಿ ಹಿನ್ ರ ಹೇಳಿಕೆಗಳನ್ನು ಧರ್ಮಬಾಹಿರ ಎ೦ದು ಘೋಷಿಸಿದ್ದಾರೆ.
ಡಿಸ೦ಬರ್ ೩೧, ೧೯೮೯ ರ೦ದು ಬೆನ್ನಿ ಹಿನ್ "ಆರ್ಲ್ಯಾ೦ಡೋ ಕ್ರೈಸ್ತ ಕೇ೦ದ್ರ" ಎ೦ಬ ತಮ್ಮ ಚರ್ಚ್ ನಲ್ಲಿ ಕೆಲವು ಭವಿಷ್ಯವಾಣಿಗಳನ್ನು ಘೋಷಿಸಿದರು. ಇವುಗಳಲ್ಲಿ ಎಲ್ಲವೂ ನಿಜವಾಗಿಲ್ಲ (ಉದಾ: ಕ್ಯೂಬಾ ದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ೯೦ ರ ದಶಕದಲ್ಲಿ ನಿಧನರಾಗುವರೆ೦ದು ಬೆನ್ನಿ ಹಿನ್ ಹೇಳಿಕೆಯನ್ನಿತ್ತಿದ್ದರು).
ನವ೦ಬರ್ ೯, ೨೦೦೪ ರ೦ದು ಕೆನಡಾ ದ ಒ೦ದು ಟಿವಿ ಚಾನಲ್ ಬೆನ್ನಿ ಹಿನ್ ರನ್ನು ಟೀಕಿಸಿ ಒ೦ದು ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಬೆನ್ನಿ ಹಿನ್ ರವರು ಭಕ್ತರನ್ನು ಮೋಸಗೊಳಿಸಲು ಅನೇಕ ಚಟುವಟಿಕೆಗಳನ್ನು ನಡೆಸಿದ್ದಾರೆ ಎ೦ದು ಈ ಕಾರ್ಯಕ್ರಮ ತೋರಿಸಿತು. ಬೆನ್ನಿ ಹಿನ್ ರವರ ಚರ್ಚ್ ಈ ಕಾರ್ಯಕ್ರಮಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಇತ್ತೀಚೆಗೆ (ಜನವರಿ ೨೧-೨೩) ಬೆ೦ಗಳೂರಿನಲ್ಲಿ ಬೆನ್ನಿ ಹಿನ್ "ಭಾರತಕ್ಕಾಗಿ ಪ್ರಾರ್ಥಿಸಿ" ಎ೦ಬ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದಾರೆ. ಇದೂ ಸಹ ಬಹಳ ವಿವಾದವನ್ನು ಸೃಷ್ಟಿಸಿದೆ.

ಕೃಷ್ಣ,ಮತ್ತು ಕ್ರಿಸ್ತನಿಗೆ ಇರುವ ವತ್ಯಾಸಗಳು .

ಕೃಷ್ಣ,ಮತ್ತು ಕ್ರಿಸ್ತನಿಗೆ ಇರುವ ವತ್ಯಾಸಗಳು ...ನನ್ನ ಪ್ರಕಾರ
ದಯವಿಟ್ಟು ಓದಿ ನಿಮ್ಮ ಅಬಿಪ್ರಾಯ ತಿಳಿಸಿ...
(ವಿಶ್ಲೇಷಣೆ ಮತ್ತು ಬರಹಗಾರರು :-ನಿಮ್ಮ ನಾರಾಯಣ ಗೌಡ )

. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು ಪಟ್ಟಿಮಾಡಿದ್ದೇನೆ. ಗಮನಿಸೋಣ. ಈ ಎರಡೂ ಅದ್ಭುತ ಅವತಾರಗಳೂ ಪೌರಾತ್ಯ ಜಗತ್ತಿನಿಂದ ಉಗಮಿಸಿದ್ದು. ಇವರೀರ್ವರ ತಂದೆ ತಾಯಂದಿರೂ ಧರ್ಮನಿಷ್ಠ ದೈವ

ಭಕ್ತರು. ಯಾದವ ಕೃಷ್ಣ ಸೆರೆಮನೆಯಲ್ಲಿ ಜನಿಸಿದರೆ, ಯೇಸು ಕ್ರಿಸ್ತನ ಜನನ ಕೊಟ್ಟಿಗೆಯಲ್ಲಾಯಿತು. ಬಾಲಕ ಕೃಷ್ಣನಿಗೆ ರಾಜ ಕಂಸನ ಕಾಟವಾದರೆ, ಬಾಲಯೇಸುವಿಗೆ ರಾಜ ಹೆರೋಡ್‌ನ ಕಾಟ! ಕೃಷ್ಣ ಗೊಲ್ಲನಾಗಿ ತನ್ನ ಲೀಲೆಗಳನ್ನು ತೋರಿದರೆ, ಯೇಸು ಕುರುಬನಾಗಿ ಪವಾಡಗಳನ್ನು ಮಾಡಿದ. ಅಜ್ಞಾನದ ಸಂಕೇತವಾದ ಕಾಳಿಯನ್ನು ಕೃಷ್ಣ ಜಯಿಸಿದರೆ ಯೇಸು ಸೈತಾನನನ್ನು ಜಯಿಸುತ್ತಾನೆ. ತನ್ನ ಭಕ್ತರನ್ನು ಕೊಂಡೊಯ್ಯುತ್ತಿದ್ದ ಹಡಗನ್ನು ಬಿರುಗಾಳಿಯಿಂದ ಯೇಸು ರಕ್ಷಿಸಿದರೆ, ವಿನಾಶಕಾರಿ ಮಳೆಯಿಂದ ತನ್ನ ಭಕ್ತರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನೇ ಕೃಷ್ಣ ಎತ್ತಿ ಹಿಡಿಯುತ್ತಾನೆ. ಇಹಲೋಕದ್ದಲ್ಲದಿದ್ದರೂ ಯಹೂದ್ಯರ ರಾಜನೆಂದು ಯೇಸು ಕರೆಸಿಕೊಂಡರೆ, ಕೃಷ್ಣ ಇಹ ಮತ್ತು ಪರಗಳೆರಡರ ಒಡೆಯ. ಯೇಸುವಿನ ಸಂದೇಶ ಸಾರಲು ಮೇರಿ, ಮಾರ್ತ ಮತ್ತು ಮೇರಿ ಮಗ್ದಲೀನ್ ಎಂಬ ಮಹಿಳಾ ಭಕ್ತರಿದ್ದರೆ, ಕೃಷ್ಣನ ಜೀವನದಲ್ಲಿ ರಾಧೆ ಮತ್ತು ಇತರೆ ಗೋಪಿಯರು ಪವಿತ್ರವಾದ ಪಾತ್ರವನ್ನು ವಹಿಸುತ್ತಾರೆ. ಯೇಸು ಕ್ತಿಸ್ತನನ್ನು ಶಿಲುಬೆಗೆ ಮೊಳೆ ಹೊಡೆದು ಏರಿಸಲ್ಪಟ್ಟರೆ, ಕೃಷ್ಣ ಬೇಡನೊಬ್ಬನ ಬಾಣದಿಂದ ಪ್ರಾಣಾಂತಕವಾಗಿ ಗಾಯಗೊಳ್ಳುತ್ತಾನೆ. ಈ ಎರಡೂ ಅವತಾರಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಭವಿಷ್ಯವಾಣಿ ಹೇಳಲ್ಪಟ್ಟಿತ್ತು. ಈ ಅವತಾರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮಗಳಲ್ಲಿ ಅತ್ಯುನ್ನತ ದೈವೀ ಪುರುಷರೆಂದು ಪರಿಗಣಿಸಲಾಗಿದೆ. ಯೇಸು ಕ್ರಿಸ್ತ ಮತ್ತು ಭಗವಾನ್ ಕೃಷ್ಣ ಪ್ರಪಂಚಕ್ಕೆ ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಪವಿತ್ರ ಗ್ರಂಥಗಳನ್ನು ನೀಡಿದ್ದಾರೆ. ಭಗವದ್ಗೀತೆಯಲ್ಲಿನ ಶ್ರೀ ಕೃಷ್ಣನ ಉಪದೇಶವೂ ಯೇಸು ಸ್ವಾಮಿಯ ಹೊಸ ಒಡಂಬಡಿಕೆಯಲ್ಲಿನ ಸಂದೇಶವೂ ಪಾರಮಾರ್ಥಿಕ ಸತ್ಯದ ಅಭಿವ್ಯಕ್ತಿಯಾಗಿದೆ. ಈ ಎರಡೂ ಪವಿತ್ರ ಗ್ರಂಥಗಳೂ ಮೂಲತಃ ಒಂದೇ ತತ್ವವನ್ನು ಬೋಧಿಸುತ್ತವೆ. ಕ್ರಿಸ್ತ ಬೋಧಿಸಿದ ಗಹನವಾದ ಧರ್ಮ ಈಗ ಕಣ್ಮರೆಯಾಗಿದೆ ಎಂದು ನನ್ನ ಭಾವನೆ. ಕೃಷ್ಣನಂತೆ ಯೇಸುವೂ ಯೋಗವನ್ನು ತನ್ನ ಅನುಯಾಯಿಗಳಿಗೆ ಕಲಿಸಿಕೊಟ್ಟಿದ್ದ
ದೇವರೊಂದು ನಾಮ ಹಲವು ಹೇಗೆ ....ಎಂದು ಮುಂದೆ ಹೇಳುತ್ತೇನೆ.