ಸೋಮವಾರ, ನವೆಂಬರ್ 12, 2012

ಹುಡುಗಿ ಮೆಚ್ಚಬೇಕೆಂದರೆ ಇರಲೇಬೇಕಾದ 6 ಗುಣಗಳು


ಹುಡುಗಿ ಮೆಚ್ಚಬೇಕೆಂದರೆ ಇರಲೇಬೇಕಾದ 6 ಗುಣಗಳು


ತುಂಬಾ ಆಕರ್ಷಕವಾಗಿರುವ ಪುರುಷರನ್ನು ಹೆಣ್ಮಕ್ಕಳು ಮದುವೆಯಾಗಬಯಸುತ್ತಾರೆ ಎಂದು ಪುರುಷರು ಅಂದುಕೊಂಡಿದ್ದರೆ ಅದು ತಪ್ಪು. ಹುಡುಗಿ ತನ್ನ ಬಾಳಸಂಗಾತಿಯಲ್ಲಿ ಅಂದಕ್ಕಿಂತ ಮಿಗಿಲಾಗಿ ಈ ಕೆಳಗಿನ ಅಂಶಗಳಿಗೆ ಹೆಚ್ಚು ಮಹತ್ವ ಕೊಡುತ್ತಾಳೆ. ತುಂಬಾ ಆಕರ್ಷವಾಗಿದ್ದು ಈ ಕೆಳಗಿನ ಗುಣಗಳು ಇಲ್ಲದಿದ್ದರೆ ಅಂತಹ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗುವುದಿಲ್ಲ.
1. ವ್ಯಕ್ತಿತ್ವ: ಅಂದವಾಗಿರುವ ಪುರುಷನಿಗಿಂತ ಉತ್ತಮ ವ್ಯಕ್ತಿತ್ವ ಹೊಂದಿರುವ ಪುರುಷನನ್ನು ಬಾಳ ಸಂಗಾತಿಯಾಗಿ ಪಡೆಯಲು ಬಯಸುತ್ತಾಳೆ. ತುಂಬಾ ಆಕರ್ಷಕವಾಗಿದ್ದು ಅವನ ಬುದ್ಧಿ ಸರಿಯಿಲ್ಲ ಅಂದರೆ ಅಂತಹವನ ಜೊತೆ ಬಾಳ್ವೆ ಮಾಡಲು ಯಾವ ಹೆಣ್ಣು ಬಯಸುವುದಿಲ್ಲ.
2. ನಡವಳಿಕೆ: ತುಂಬಾ ಸಿಡುಕಿನ ಸ್ವಭಾವ ಹೊಂದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಮಾತನಾಡುವುದು, ಹಿರಿಯರಿಗೆ ಗೌರವ ಕೊಡದಿರುವುದು, ಬಾಯಿಗೆ ಬಂದ ಹಾಗೆ ಮಾತನಾಡುವುದು ಈ ರೀತಿಯ ಗುಣಗಳನ್ನು ಹೊಂದಿದ್ದರೆ ಅಂತಹ ಹುಡುಗರು ಹುಡುಗಿಯರಿಗೆ ಇಷ್ಟವಾಗುವುದಿಲ್ಲ.

3. ಪ್ರೀತಿ ಮತ್ತು ಕಾಳಜಿ:
ಈ ಗುಣವನ್ನು ಹೊಂದಿರುವ ಪುರುಷ ಹುಡುಗಿಯರಿಗೆ ಬೇಗನೆ ಇಷ್ಟವಾಗುತ್ತಾನೆ. ಮನೆಯವರ ಬಗ್ಗೆ ಕಾಳಜಿ ಮತ್ತು ಪ್ರೀತಿ ಹೊಂದಿದ್ದರೆ ತನ್ನನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭರವಸೆ ಹೊಂದುತ್ತಾಳೆ.

4. ಬುದ್ಧಿವಂತಿಕೆ:
ಬುದ್ಧಿವಂತ ಪುರುಷರು ಸುಲಭದಲ್ಲಿಯೆ ಹುಡುಗಿಯರ ಮನ ಗೆಲ್ಲುತ್ತಾರೆ. ಬುದ್ಧಿವಂತ ಹುಡುಗನಾಗಿದ್ದರೆ ಹುಡುಗಿಯರು ಅವನ ಅಂದದ ಬಗ್ಗೆ ಹೆಚ್ಚು ಗಮನ ಕೊಡದೆ ಅವನ ಬುದ್ಧಿವಂತಿಕೆಗೆ ಮಾನ್ಯತೆ ಕೊಡುತ್ತಾರೆ. ತುಂಬಾ ಚೆಂದ ಇದ್ದು ದಡ್ಡನಾಗಿದ್ದರೆ ಅಂತಹ ಹುಡುಗರು ಹುಡುಗಿಯರಿಗೆ ಇಷ್ಟವಾಗುವುದಿಲ್ಲ.
5. ಹಣ ಮತ್ತು ಉದ್ಯೋಗ: ಉತ್ತಮವಾದ ಉದ್ಯೋಗ, ಕೈ ತುಂಬಾ ಸಂಬಳವಿದ್ದರೆ ಹುಡುಗ ನೋಡಲು ಚೆನ್ನಾಗಿ ಇಲ್ಲದಿದ್ದರೂ ರೂಪವಂತಿಯಾದ ಹುಡುಗಿ ಅವನ ಬಾಳ ಸಂಗಾತಿಯಾಗಿ ಬರಲು ಸಿದ್ಧವಿರುತ್ತಾಳೆ. ಇಲ್ಲಿ ಹೆಣ್ಣು ಚೆಂದಕ್ಕೆ ಬದಲಾಗಿ ತನ್ನ ಸುರಕ್ಷತೆಯನ್ನು ನೋಡುತ್ತಾಳೆ.
6. ಒಡನಾಟ: ಗಂಡನಾದವನು ಉತ್ತಮವಾದ ಒಡನಾಟವನ್ನು ಹೊಂದಿರಬೇಕು. ಒಬ್ಬ ಗೆಳೆಯನಂತೆ ಆತ್ಮೀಯತೆಯಿಂದ ವರ್ತಿಸಬೇಕು ಅಂತ ಹೆಣ್ಣು ಬಯಸುತ್ತಾಳೆ. ಈ ಗುಣವಿರುವ ಪುರುಷರನ್ನು ಹೆಣ್ಣು ತುಂಬಾ ಇಷ್ಟಪಡುತ್ತಾಳೆ.

ನಿಮ್ಮ ಅಭಿಪ್ರಾಯ ತಿಳಿಸಿ..

ಸೋಮವಾರ, ನವೆಂಬರ್ 5, 2012

ಕನ್ನಡ ಪರ ಹೋರಾಟ ಸಂಘಗಳು ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲ್ಲಿ ?

ಕನ್ನಡ ಪರ ಹೋರಾಟ ಸಂಘಗಳು

ನಮ್ಮ ಇಂದಿನ ಕನ್ನಡ ಪರ ಹೋರಾಟ ಸಂಘಗಳು ಕೇವಲ ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡ ಬಾವುಟವನ್ನು ಹಿಡಿದು ಕನ್ನಡಮ್ಮನಿಗೆ ಜೈಕಾರವನ್ನು ಕೂಗುತ್ತಾರೆ.ಆದರೆ ಬೇರೆ ದಿನಗಳಲ್ಲಿ ಕನ್ನಡದ ನೆನಪೇ ಇವರಿಗೆ ಇರುವುದಿಲ್ಲ..ಕೇವಲ ಹಣ ಮಾಡುವುದಕ್ಕೆ ಮಾತ್ರ ಈ ಸಂಘಗಳು ಕಾರ್ಯನಿರ್ವಹಿಸುತ್ತಾರೆ.ಅನ್ನೋವಷ್ಟ್ರ ಮಟ್ಟಿಗೆ ಇವು ನಮ್ಮ ರಾಜ್ಯದಲ್ಲಿ ಹೋರಾಟನಡಿಸುತ್ತವೆ..ಇವರ ಮಟ್ಟಿಗೆ ಕನ್ನಡಪರ ಹೋರಾಟದ ಸಂಘಗಳು ಒಂದು ಕಂಪನಿಯ ರೀತಿಯಲ್ಲಿ ಅದರ ರಾಜ್ಯಾದ್ಯಕ್ಷ ಕಂಪನಿಯ ಎಂ.ಡಿ.ಯ ರೀತಿ ನಡಿದುಕೊಳ್ಳುತ್ತಾರೆ.ಇವರು ನಿಜವಾದ ಕನ್ನಡ ಪ್ರೇಮಿಗಳೇ ಆಗಿದ್ದರೆ ನನ್ನ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲಿ...
೧)ಹೋರಾಟ ನಡಿಸುವ ಸಮಯದಲ್ಲಿ ನೀವು ಸುಮ್ನೇ ಶಾಂತ ರೀತಿಯಲ್ಲಿ ಇರುತಿರಿ ಆದರೆ ಮದ್ಯಮಗಳು ಬಂದ ಕೂಡಲೇ ಯಾಕೆ ನಿಮಗೆ ಕನ್ನಡ ಪ್ರೇಮ ಹೆಚ್ಚಾಗುವುದು ಅಂದರೆ ನಿಮ್ಮ ಕನ್ನಡ ಪ್ರೇಮ ನಾಟಕನ ಹ ?
೨) ಮದ್ಯಮದವರು ನಿಮ್ಮ ಸಂದರ್ಶನ ಮುಗಿಸಿದ ಮೇಲೆ ನೀವು ಯಾಕೆ ನಿಮ್ಮ ಹೋರಾಟವನ್ನು ಮುಂದುವರಿಸುವುದಿಲ್ಲ..ಏನು ನಡೆದೇ ಇಲ್ಲ ಎನ್ನುವ ರೀತಿಯಲ್ಲಿ ಹೊರಟ್ಟು ಹೋಗುತ್ತಿರ ಏಕೆ ನಿಮ್ಮ ಕನ್ನಡ ಪ್ರೇಮ ಮದ್ಯಮದವರಿಗೆ ಸಂದರ್ಶನ ನೀಡುವವರೆಗೆ ಮಾತ್ರನ?
೩)ನಿಮ್ಮ ಹೋರಾಟಗಳು ಕೇವಲ ಒಂದು ದಿನದ ಹೋರಾಟಯಾಕೆ ಸರಿಯಾದ ನ್ಯಾಯಸಿಗುವವರೆಗೆ ಯಾಕೆ ನೀವು ನಿಮ್ಮ ಹೋರಾಟವನ್ನು ಮುಂದುವರೆಸುವುದಿಲ್ಲ..ಯಾಕೆ ಮದ್ಯದಲ್ಲೇ ಹೋರಾಟವನ್ನು ನಿಲ್ಲಿಸಿ ಬಿಡುತ್ತಿರ..?
೪)ನಮ್ಮ  ರಾಜ್ಯದಲ್ಲಿ ಒಟ್ಟು ಎಷ್ಟು ಕನ್ನಡ ಪರ ಹೋರಾಟ ಸಂಘಗಳು  ಇವೆ ?
೫)ಯಾಕೆ ನೀವು ಬೇರೆ ಬೇರೆ ಕನ್ನಡ ಪರ ಹೋರಾಟ ಸಂಘಗಳು ಮಾಡಿಕೊಂಡು ಹೋರಾಟ ನಡಿಸುತ್ತೀರ.ಒಂದೇ ಕನ್ನಡ ಪರ ಹೋರಾಟ ಸಂಘದ ಅಡಿಯಲ್ಲಿ ಯಾಕೆ ನೀವು ಹೋರಾಟ ನಡಿಸುವುದಿಲ್ಲ..
೬)ನಿಮಗೆ ನಿಮ್ಮ ಕನ್ನಡ ಪರ ಹೋರಾಟ ಸಂಘದ ಹೆಸರು ಅಥವಾ ನಿಮ್ಮ ವೈಯಕ್ತಿಕ ಪ್ರತಿಷ್ಠೆ ಮುಖ್ಯವಾಗಿ ಬಿಡುತ..ಕನ್ನಡ ಅಲ್ವ..ಹ ..?
೭)ನಿಮ್ಮ ನಿಮ್ಮ ಕನ್ನಡ ಪರ ಹೋರಾಟ ಸಂಘಗಳಲ್ಲಿ  ಜಗಳ ಯಾಕೆ ? ನೀವು ಕನ್ನಡಿಗರು ತಾನೇ ?
೮)ನಾವು ಯಾವ ಕನ್ನಡ ಪರ ಹೋರಾಟ ಸಂಘ ನಂಬಬೇಕು.?
ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ..
ನಿಮ್ಮ ನಾರಾಯಣಗೌಡ 

ಓದುಗರೇ ನೀವು ಸಹ ನಿಮ್ಮ ಅಬಿಪ್ರಾಯಗಳನ್ನೂ ಬರೆಯಿರಿ ..ಹಾಗು ನನ್ನ ಪ್ರಶ್ನೆ ಗಳಿಗೆ ನೀವು ಸಹ ಉತ್ತರಿಸಬಹುದು..

ಭಾನುವಾರ, ನವೆಂಬರ್ 4, 2012

ಮಲಾಲ ಡೈರಿಯಿಂದ......


ಮಲಾಲ ಡೈರಿಯಿಂದ

ಪಾಕಿಸ್ತಾನಿ ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು ಗುಲ್ ಮಕಾಯಿ ಎಂಬ ಕಾವ್ಯನಾಮದಡಿಯಲ್ಲಿ ಬಿಬಿಸಿ ಉರ್ದುವಿನಲ್ಲಿ ಪ್ರಕಟಣೆಗೆ ನೀಡಿದ್ದು ಈಕೆಯ ಬಹುದೊಡ್ಡ ತಪ್ಪು. ಅಂದಹಾಗೆ ಮಲಾಲ ಯೂಸುಫ್ ಝಾಯಿ ಎಂಬ ಹೆಸರಿನ ಈ ಹೋರಾಟಗಾರ್ತಿಯ ವಯಸ್ಸು ಹದಿನಾಲ್ಕು.

ಶನಿವಾರ ಜನವರಿ 3: ಭಯವಾಗ್ತಿದೆ
ನಿನ್ನೆ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ ಗಳು ಮತ್ತು ತಾಲಿಬಾನಿಗಳು ಬಂದಿದ್ದರು. ನಮ್ಮ ಸ್ವಾಟ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಶುರುವಾದಾಗಿನಿಂದ ಈ ರೀತಿಯ ದುಸ್ವಪ್ನಗಳು ಮಾಮೂಲಾಗಿವೆ. ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ಶಾಲೆಗೆ ಹೊರಟೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನಿಗಳು ನಿಷೇಧಿಸಿರುವುದರಿಂದ ನನಗೆ ಭಯವಾಗುತ್ತಿದೆ.

27 ಜನರಲ್ಲಿ 11 ಮಂದಿ ಮಾತ್ರ ಶಾಲೆಗೆ ಬಂದಿದ್ದೆವು. ತಾಲಿಬಾನ್ ಆದೇಶದಿಂದ ಹಾಜರಾತಿ ಕಡಿಮೆಯಾಗಿತ್ತು. ನನ್ನ ಮೂವರು ಗೆಳತಿಯರು ಈ ಆದೇಶದ ನಂತರ ತಮ್ಮ ಕುಟುಂಬದೊಡನೆ ಲಾಹೋರ, ಪೇಷಾವರ, ರಾವಲ್ಪಿಂಡಿಗೆ ಹೊರಟುಹೋಗಿದ್ದಾರೆ. 'ಸಾಯಿಸಿಬಿಡ್ತೀನಿ ನಿನ್ನ' ಶಾಲೆಯಿಂದ ಮರಳುವಾಗ ವ್ಯಕ್ತಿಯೊಬ್ಬನ ಧ್ವನಿ ಕೇಳಿ ಗಾಬರಿಯಾಗಿ ನಡೆಯುವ ವೇಗ ಹೆಚ್ಚಿಸಿದೆ. ಸ್ವಲ್ಪ ದೂರ ಕ್ರಮಿಸಿದ ಮೇಲೆ ಆ ವ್ಯಕ್ತಿ ಹಿಂಬಾಲಿಸುತ್ತಿದ್ದಾನಾ ಎಂಬ ಕುತೂಹಲದಿಂದ ತಿರುಗಿ ನೋಡಿದೆ. ನೆಮ್ಮದಿ ನೀಡಿದ ಸಂಗತಿಯೆಂದರೆ ಆತ ಫೋನಿನಲ್ಲಿ ಮಾತನಾಡುತ್ತಿದ್ದ, ಫೋನಿನಲ್ಲಿ ಯಾರಿಗೋ ಬೆದರಿಕೆ ಹಾಕುತ್ತಿರಬೇಕು.

ಭಾನುವಾರ ಜನವರಿ 4: ಎದೆಬಡಿತ ಹೆಚ್ಚುತ್ತದೆ.
ಶಾಲೆಗೆ ಹೋಗಬೇಕು,. ಇಂದು ಶಾಲೆಗೆ ರಜೆ; ಹಾಗಾಗಿ ತಡ ಮಾಡಿ ಎದ್ದೆ, ಹತ್ತು ಘಂಟೆಗೆ. ಗ್ರೀನ್‌ನ್ ಚೌಕದಲ್ಲಿ ಬಿದ್ದ ಮೂರು ಹೆಣಗಳ ಬಗ್ಗೆ ತಂದೆ ಮಾತನಾಡುತ್ತಿದ್ದುದನ್ನು ಕೇಳಿ ಬೇಸರವಾಯಿತು. ಈ ಸೈನಿಕ ಕಾರ್ಯಾಚರಣೆ ಆರಂಭಗೊಳ್ಳುವುದಕ್ಕೆ ಮುಂಚೆ ಪ್ರತಿ ಭಾನುವಾರ ಮರ್ಗಾಜರ, ಫಿಜಾ ಘಾಟ್ ಅಥವಾ ಕಡ್ಜುಗೆ ಪಿಕ್ನಿಕ್ಕಿಗೆ ಹೋಗುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದ್ಯಾವುದೂ ಸಾಧ್ಯವಿಲ್ಲ; ಪಿಕ್ನಿಕ್ಕಿಗೆ ತೆರಳಿ ಒಂದೂವರೆ ವರುಷದ ಮೇಲಾಯಿತು.

ರಾತ್ರಿ ಊಟದ ನಂತರ ಒಂದಷ್ಟು ತಿರುಗಾಡಿ ಬರುತ್ತಿದ್ದೆವು; ಈಗ? ಸೂರ್ಯ ಮುಳುಗುವುದಕ್ಕೆ ಮುಂಚಿತವಾಗಿಯೇ ಮನೆ ಸೇರಬೇಕು. ಒಂದಷ್ಟು ಮನೆಗೆಲಸ ಮಾಡಿ, ಹೋಮ್ ವರ್ಕ್ ಮುಗಿಸಿ ತಮ್ಮನ ಜತೆ ಆಟವಾಡಿದೆ. ನಾಳೆ ಪುನಃ ಶಾಲೆಗೆ ಹೋಗುವಾಗ ಏನಾಗಬಹುದು ಎಂಬುದನ್ನು ನೆನೆಸಿಕೊಂಡರೇ ಎದೆಬಡಿತ ಹೆಚ್ಚುತ್ತದೆ.

ಸೋಮವಾರ ಜನವರಿ 5: ಬಣ್ಣದ ಬಟ್ಟೆ ಧರಿಸಬಾರದು
ಬಣ್ಣದ ಬಟ್ಟೆಗಳನ್ನೂ ಧರಿಸಬಾರದು. ಶಾಲೆಗೆ ಹೊರಡಲು ತಯಾರಾಗುತ್ತ ಯೂನಿಫಾರ್ಮ್ ಕೈಗೆತ್ತಿಕೊಂಡಾಗ ಪ್ರಿನ್ಸಿಪಾಲ್ ಹೇಳಿದ್ದು ನೆನಪಾಯಿತು. ಯುನಿಫಾರಂ ಧರಿಸಿ ಬರಬೇಡಿ, ಸಾದಾ ಉಡುಪಿನಲ್ಲೇ ಶಾಲೆಗೆ ಬನ್ನಿ ಎಂದು ತಿಳಿಸಿದ್ದರು. ನನ್ನ ಮೆಚ್ಚುಗೆಯ ಪಿಂಕ್ ಬಣ್ಣದ ಬಟ್ಟೆಯನ್ನು ಧರಿಸಿ ಹೊರಟೆ. ಶಾಲೆಯ ಹುಡುಗಿಯರೆಲ್ಲ ಬಣ್ಣ ಬಣ್ಣದ ಬಟ್ಟೆ ಧರಿಸಿ ಬಂದಿದ್ದರು; ಮನೆಯ ವಾತಾವರಣವಿತ್ತು ಶಾಲೆಯಲ್ಲಿ. ಸತ್ಯ ಹೇಳು. ತಾಲಿಬಾನಿಗಳು ನಮ್ಮ ಶಾಲೆಯ ಮೇಲೆ ದಾಳಿ ಮಾಡುತ್ತಾರಾ? ಗೆಳತಿಯೊಬ್ಬಳು ಬಳಿ ಬಂದು ಕೇಳಿದಳು. ಬೆಳಗಿನ ಅಸೆಂಬ್ಲಿಯಲ್ಲಿ ಬಣ್ಣದ ಬಟ್ಟೆ ಧರಿಸಿ ಬರಬೇಡಿ, ತಾಲಿಬಾನ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಬಹುದು ಎಂದು ತಾಕೀತು ಮಾಡಿದರು.

ಶಾಲೆಯಿಂದ ಬಂದು ಊಟ ಮುಗಿಸಿ ಟ್ಯೂಷನ್ನಿಗೆ ಹೋಗಿ ಬಂದೆ. ಸಂಜೆ ಟಿವಿ ನೋಡುತ್ತಿದ್ದಾಗ ಶಕರ್ದದಲ್ಲಿ ಹದಿನೈದು ದಿನಗಳ ನಂತರ ಕರ್ಫ್ಯೂ ಹಿಂದೆಗೆದುಕೊಂಡ ಸುದ್ದಿ ಕೇಳಿ ಖುಷಿಯಾಯಿತು. ನಮ್ಮ ಇಂಗ್ಲಿಷ್ ಟೀಚರ್ ಶಕರ್ದದಲ್ಲಿ ವಾಸವಿದ್ದರು; ಬಹುಶಃ ಅವರು ನಾಳೆ ಶಾಲೆಗೆ ಬರುತ್ತಾರೆ.

ಬುಧವಾರ ಜನವರಿ 7: ಗುಂಡಿನ ಸದ್ದಿಲ್ಲ; ಭಯವೂ ಇಲ್ಲ
ಮೊಹರಂ ರಜೆಗೆ ಬುನೈರಿಗೆ ಬಂದಿದ್ದೇನೆ. ಎತ್ತರದ ಪರ್ವತ ಹಸಿರು ನೆಲದ ಹಾಸಿರುವ ಬುನೈರ್ ನನಗೆ ಪ್ರಿಯವಾದ ಜಾಗ. ನನ್ನ ಸ್ವಾತ್ ಕೂಡ ಸುಂದರವಾಗಿದೆ; ಆದರೆ ಶಾಂತತೆಯಿಲ್ಲ. ಬುನೈರಿನಲ್ಲಿ ಶಾಂತಿಯಿದೆ; ನೆಮ್ಮದಿಯಿದೆ; ಗುಂಡಿನ ಸದ್ದು ಕೇಳುವುದಿಲ್ಲ. ಭಯವೂ ಇಲ್ಲ. ನಾವೆಲ್ಲರೂ ಸಂತಸದಿಂದಿದ್ದೇವೆ. ಇಂದು ಪೀರ ಬಾಬಾ ಸಮಾಧಿಗೆ ಹೋಗಿದ್ದೆವು. ಜನರಿಂದ ಗಿಜಿಗುಡುತ್ತಿತ್ತು. ಅವರು ಪ್ರಾರ್ಥಿಸಲು ಬಂದಿದ್ದರೆ ನಾವು ರಜೆ ಕಳೆಯಲು ಬಂದಿದ್ದೆವು. ಆವರಣದಲ್ಲಿ ಬಳೆ, ಕಿವಿಯೋಲೆ, ನಕಲಿ ಗಿಲೀಟು ಒಡವೆಯ ಅಂಗಡಿಗಳಿದ್ದವು. ಏನನ್ನಾದರೂ ಖರೀದಿಸಬೇಕು ಎಂದುಕೊಂಡೆನಾದರೂ ಯಾವುದೂ ಅಷ್ಟು ಇಷ್ಟವಾಗಲಿಲ್ಲ. ಅಮ್ಮ ಕಿವಿಯೋಲೆ ಮತ್ತು ಬಳೆ ಖರೀದಿಸಿದರು.

ಶುಕ್ರವಾರ ಜನವರಿ 9: ಮೌಲಾನಾ ರಜೆ ಹಾಕಿದ್ದಾರಾ?
ಇವತ್ತು ಶಾಲೆಯಲ್ಲಿ ಬುನೈರ್ ಪ್ರವಾಸದ ಬಗ್ಗೆ ಗೆಳತಿಯರಲ್ಲಿ ಹೇಳಿದೆ. ಬುನೈರ್ ಕಥೆ ಕೇಳಿ ಕೇಳಿ ನಮಗೆ ಬೇಸರವಾಗಿದೆ ಎಂದು ಮುಖ ತಿರುಗಿಸಿದರು. ಎಫ್ ಎಮ್ ರೇಡಿಯೋದಲ್ಲಿ ಭಾಷಣ ಮಾಡುತ್ತಿದ್ದ ಮೌಲಾನ ಶಾಹ ದುರಾನ್ ರ ಸಾವಿನ ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆ ಹರಟಿದೆವು. ಹುಡುಗಿಯರು ಶಾಲೆಗೆ ಹೋಗಬಾರದು ಎಂದು ಘೋಷಿಸಿದ್ದು ಇದೇ ಮೌಲಾನ.

ಕೆಲವು ಹುಡುಗಿಯರು ಮೌಲಾನ ಸತ್ತುಹೋಗಿದ್ದಾರೆ ಎಂದರು; ಉಳಿದವರು ಒಪ್ಪಲಿಲ್ಲ. ನಿನ್ನೆ ರಾತ್ರಿ ಎಫ್ ಎಮ್ ರೇಡಿಯೋದಲ್ಲಿ ಅವರ ಎಂದಿನ ಭಾಷಣ ಬರಲಿಲ್ಲವಾಗಿ ಅವರ ಸಾವಿನ ಗಾಳಿ ಸುದ್ದಿ ಹರಡುತ್ತಿತ್ತು. ಮೌಲಾನ ರಜೆಯ ಮೇಲೆ ಹೋಗಿದ್ದಾರಷ್ಟೇ ಎಂದೊಂದು ಹುಡುಗಿ ಹೇಳಿದಳು.

ಶುಕ್ರವಾರ ಟ್ಯೂಷನ್ ಇಲ್ಲದ ಕಾರಣ ಇಡೀ ಮಧ್ಯಾಹ್ನ ಎಂದಿಗಿಂತ ಹೆಚ್ಚು ಆಟವಾಡುತ್ತ ಕಳೆದೆ. ಸಂಜೆ ಟಿ ವಿ ಮುಂದೆ ಕುಳಿತಾಗ ಲಾಹೋರಿನಲ್ಲಿ ಬಾಂಬ್ ಸ್ಫೋಟವಾದ ಸುದ್ದಿ ಬಿತ್ತರವಾಗುತ್ತಿತ್ತು. ಪಾಕಿಸ್ತಾನದಲ್ಯಾಕೆ ಇಷ್ಟೊಂದು ಬಾಂಬ್ ಸ್ಫೋಟಗಳಾಗುತ್ತವೆ? ನನಗೆ ನಾನೇ ಕೇಳಿಕೊಂಡೆ

ಬುಧವಾರ ಜನವರಿ 14 : ಮತ್ತೆ ಶಾಲೆಗೆ ಹೋಗುವುದು ಅನುಮಾನ
ಇಂದು ಶಾಲೆಗೆ ಹೋಗುವಾಗ ಮನಸ್ಸು ಸರಿಯಿರಲಿಲ್ಲ. ನಾಳೆಯಿಂದ ಚಳಿಗಾಲದ ರಜೆ ಪ್ರಾರಂಭವಾಗುತ್ತದೆ. ಪ್ರಿನ್ಸಿಪಾಲರು ರಜೆಯ ಆರಂಭದ ಬಗ್ಗೆ ನಿನ್ನೆ ತಿಳಿಸಿದರಾದರೂ ಮತ್ತೆ ಶಾಲೆ ಪ್ರಾರಂಭವಾಗುವುದರ ಬಗ್ಗೆ ಏನೂ ಹೇಳಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಆಗುತ್ತಿದೆ.

ಮುಂಚೆ ಶಾಲೆ ಪುನಾಂಭವಾಗುವ ದಿನವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದರು. ಈ ಬಾರಿ ಪ್ರಿನ್ಸಿಪಾಲರು ದಿನಾಂಕವನ್ನೂ ತಿಳಿಸಲಿಲ್ಲ, ಕಾರಣವನ್ನೂ ಹೇಳಲಿಲ್ಲ. ನನ್ನ ಅಂದಾಜಿನಂತೆ ತಾಲೀಬಾನ್ ಜನವರಿ 15ರಿಂದ ಹುಡುಗಿಯರ ಶಿಕ್ಷಣವನ್ನು ನಿಷೇಧಿಸಿರುವುದೇ ಪ್ರಿನ್ಸಿಪಾಲರ ಮೌನಕ್ಕೆ ಕಾರಣ.

ಈ ಬಾರಿ ನಮಗ್ಯಾರಿಗೂ ರಜೆಯ ಬಗ್ಗೆ ಹೆಚ್ಚು ಸಂತಸವಿರಲಿಲ್ಲ. ತಾಲೀಬಾನ್ ಆದೇಶ ಜಾರಿಗೆ ಬಂದರೆ ಮತ್ತೆ ನಾವು ಶಾಲೆಗೆ ಬರಲಾಗುವುದಿಲ್ಲ ಎಂಬ ವಿಷಯ ನಮ್ಮ ಅರಿವಿಗೆ ಬಂದಿತ್ತು. ಕೆಲವು ಹುಡುಗಿಯರು ಮತ್ತೆ ಫೆಬ್ರವರಿಯಲ್ಲಿ ಶಾಲೆ ಪ್ರಾರಂಭವಾಗುವುದರ ಬಗ್ಗೆ ಆಶಾವಾದ ಹೊಂದಿದ್ದರು. ಆದರೆ ಇತರರು ತಮ್ಮ ತಂದೆ ತಾಯಿ ಶಿಕ್ಷಣದ ಸಲುವಾಗಿ ಸ್ವಾತ್ ಪ್ರದೇಶದಿಂದ ಬೇರೆ ನಗರಗಳಿಗೆ ಹೋಗುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಕೊನೆಯ ದಿನವಾದ ಕಾರಣ ಎಂದಿಗಿಂತ ಹೆಚ್ಚು ಸಮಯ ಮೈದಾನದಲ್ಲಿ ಆಟವಾಡಿದೆವು. ಶಾಲೆ ಮತ್ತೆ ಪ್ರಾರಂಭವಾಗುತ್ತದೆಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೂ ಶಾಲೆಯಿಂದ ಮರಳುವಾಗ ಮತ್ಯಾವತ್ತೂ ಇಲ್ಲಿಗೆ ಬರಲಾರನೆಂಬ ಭಾವದಿಂದ ನಮ್ಮ ಕಟ್ಟಡದ ಕಡೆಗೆ ನೋಡಿದೆ.

ಗುರುವಾರ ಜನವರಿ 15: ಬಂದೂಕಿನ ಮೊರೆತದ ರಾತ್ರಿ.
ರಾತ್ರಿಯಿಡೀ ಬಂದೂಕಿನ ಮೊರೆತದ ಕಾರಣದಿಂದ ನಿದ್ರೆ ಸರಿಯಾಗಿ ಬರಲಿಲ್ಲ. ಮೂರು ಬಾರಿ ಎಚ್ಚರವಾಗಿತ್ತು. ಶಾಲೆಯಿಲ್ಲದ ಕಾರಣ ಹತ್ತರ ಸುಮಾರಿಗೆ ಹಾಸಿಗೆಯಿಂದೆದ್ದೆ. ನಂತರ ಮನೆಗೆ ಬಂದ ಗೆಳತಿಯೊಡನೆ ಹೋಮ್ ವರ್ಕಿನ ಬಗ್ಗೆ ಚರ್ಚಿಸಿದೆ. ಇಂದು ಜನವರಿ 15, ತಾಲೀಬಾನ್ ಆದೇಶ ಜಾರಿಗೆ ಬರಲು ಕೊನೆಯ ದಿನ. ನನ್ನ ಗೆಳತಿ ಇದ್ಯಾವುದರ ಪರಿವೆ ಮಾಡದೇ ಏನೂ ಆಗದವಳ ಹಾಗೆ ಹೋಮ್ ವರ್ಕಿನ ಬಗ್ಗೆ ಮಾತನಾಡುತ್ತಿದ್ದಳು.

ಇಂದು ಬಿಬಿಸಿ ಉರ್ದುಗೆ ಬರೆದ ನನ್ನ ಡೈರಿಯ ಪುಟಗಳನ್ನು ಓದಿದೆ ಮತ್ತು ಪತ್ರಿಕೆಯಲ್ಲಿ ಪ್ರಕಟಿಸಿದೆ. 'ಗುಲ್ ಮಕಾಯಿ' ಎಂಬ ನನ್ನ ಕಾವ್ಯನಾಮವನ್ನು ತಾಯಿ ಮೆಚ್ಚಿದರು. 'ಅವಳ ಹೆಸರನ್ನು ಗುಲ್ ಮಕಾಯಿ ಎಂದೇ ಬದಲಾಯಿಸಬಹುದಲ್ಲವೇ?' ಎಂದು ತಂದೆಯ ಬಳಿ ಹೇಳುತ್ತಿದ್ದರು. ನನಗೂ ಗುಲ್ ಮಕಾಯಿ ಎಂಬ ಹೆಸರೇ ಇಷ್ಟ, ಕಾರಣ, ನನ್ನ ನಿಜ ಹೆಸರಿನ ಅರ್ಥ' ದುಃಖ ಭರಿತಳು'!

ತಂದೆ ಹೇಳುತ್ತಿದ್ದರು, ಕೆಲವು ದಿನಗಳ ಹಿಂದೆ ಡೈರಿಯ ಪ್ರಿಂಟ್ ಔಟನ್ನು ಒಬ್ಬರ್ಯಾರೋ ತೆಗೆದುಕೊಂಡು ಬಂದು ಎಷ್ಟು ಚೆಂದ ಬರೆದಿದ್ದಾರಾಲ್ವ ಎಂದು ಹೊಗಳುತ್ತಿದರಂತೆ. ಬರೆದಿರುವುದು ನನ್ನ ಮಗಳು ಎಂದು ಹೇಳಿಕೊಳ್ಳಲಾಗದೆ ತಂದೆ ಮುಗುಳ್ನಕ್ಕು ಸುಮ್ಮನಾದರಂತೆ! 

ನಿಮ್ಮ ಅಬಿಪ್ರಾಯ ಬರೆಯಿರಿ 

ವಿವೇಕಾನಂದ ನುಡಿಮುತ್ತುಗಳು

ಸ್ವೀಕರಿಸುವ ಮನಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು
ಈಜುವ ಮನಸಿದ್ದರೆ ಜ್ಞಾನ ಸಾಗರದಲ್ಲಿ ಈಜು
ನಡೆಯುವ ಮನಸಿದ್ದರೆ ಸನ್ಮಾರ್ಗದಲ್ಲಿ ನಡೆ
ಮಾತನಾಡುವುದಿದ್ದರೆ ಸತ್ಯವನ್ನೇ ಮಾತನಾಡು
ಹಾಡುವುದಿದ್ದರೆ ಅನುಭವದ ಮಾತುಗಳನ್ನೇ ಹಾಡು
ಕೇಳುವುದಿದ್ದರೆ ಸದುಪದೇಶಗಳನ್ನು ಕೇಳು
ದೊರಕಿಸುವುದಿದ್ದರೆ ಜಯವನ್ನೇ ದೊರಕಿಸು
ನುಂಗುವ ಇಚ್ಚೆಯಿದ್ದರೆ ಸಿಟ್ಟನ್ನೇ ನುಂಗು


ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ.ನಾವು ಒಂದು ಸ್ಥಿರವಾದ ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ.
- ಸ್ವಾಮಿ ವಿವೇಕಾನಂದ


ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
- ಸ್ವಾಮಿ ವಿವೇಕಾನಂದ


ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು.
- ಸ್ವಾಮಿ ವಿವೇಕಾನಂದ


ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು.

- ಸ್ವಾಮಿ ವಿವೇಕಾನಂದ
ದಯವಿಟ್ಟು ನಿಮ್ಮ ಅಬಿಪ್ರಾಯ ಬರೆಯಿರಿ  

ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ ಸನ್ನಿ ಲಿಯೋನ್!

ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ ಸನ್ನಿ ಲಿಯೋನ್!

ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರಿಟಿ ಯಾರು? ಈ ಬಗ್ಗೆ ಸಾಕಷ್ಟು ಚರ್ಚೆಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆದರೆ ಈಗ ಸಾಕಷ್ಟು ಸಮೀಕ್ಷೆ ನಡೆಸಿದ ಅಧ್ಯಯನ ತಂಡವೊಂದು ಅದು ಕಾಮಕನ್ಯೆ ಸನ್ನಿ ಲಿಯೋನ್ ಎಂಬ ಸತ್ಯವನ್ನು ಬಹಿರಂಗಪಡಿಸಿದೆ. ಯಾವುದೇ ವಯಸ್ಸಿನ, ಯಾವುದೇ ದೇಶದ ಜನರಾಗಲೀ ಸನ್ನಿ ಲಿಯೋನ್ ಅವರನ್ನು ನೋಡಲು ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡುತ್ತಾರೆ ಎಂಬ ಅಂಶವೀಗ ಬಹಿರಂಗಗೊಂಡಿದೆ.
ಇಂಟರ್ ನೆಟ್ ನಲ್ಲಿ 'ಸನ್ನಿ ಲಿಯೋನ್' ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ. ಅವರಷ್ಟು ನಿದ್ದೆಗೆಡಿಸಿದ ನಟಿಯರು ಬೇರೆ ಯಾರೂ ಇಲ್ಲ. ಸನ್ನಿ ಜಪ ಮಾಡಿದಷ್ಟು ಬೇರೆ ಯಾವುದೇ ನಟಿ ಅಥವಾ ಮಾಡೆಲ್ ಜಪ ಪ್ರಪಂಚದಲ್ಲಿ ನಡೆಯುವುದಿಲ್ಲ. ಎಂತವರೂ ಕೂಡ ಸನ್ನಿ ಲಿಯೋನ್ ಫೋಟೋ ಕಂಡೊಡನೆ ರಸಿಕನಾಗಬಲ್ಲ. ಅಂತಹ ಮಾಂತ್ರಿಕ ಮೈಮಾಟ, ಹಾಗೂ ಲುಕ್ ಸನ್ನಿಯದ್ದು. ಮನುಷ್ಯರ ಮನಸ್ಸಿನಲ್ಲಿ ಭೀಕರ ಬಿರುಗಾಳಿ ಮಹಾ ಚಂಡಮಾರುತಕ್ಕೆ ಕಾರಣವಾಗುವ ಮಟ್ಟಿಗೆ ಸನ್ನಿ ಲಿಯೋನ್ ಅಪಯಕಾರಿ.
ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಚರ್ಚೆಗೆ ಗುರಿಯಾದ ನಟಿ, ಸೆಲೆಬ್ರಿಟಿ ಈ 'ಸನ್ನಿ ಲಿಯೋನ್'. ಸನ್ನಿ ಫೋಟೋ ನೋಡಿ ಕಣ್ಣು ತುಂಬಿಕೊಂಡವರು ಅಸಂಖ್ಯಾತ! ಯಾವುದೇ ಸಿಗ್ಗಿಲ್ಲದೆ ಆಕೆ ನಟಿಸಿರುವ ಕಾಮದಾಟದ ದೃಶ್ಯಗಳನ್ನು ನೋಡಿ ಮೈ ಬೆಚ್ಚಗಾಗಿಸಿಕೊಂಡವರು ಕೋಟ್ಯಾಂತರ ಮಂದಿ. ಅವರಿಗಾಗಿಯೇ ಕೋಟ್ಯಾಂತರ ಮಂದಿ ಅಂತರ್ಜಾಲದ ವಿವಿಧ ತಾಣಗಳಿಗೆ ಭೇಟಿ ನೀಡುತ್ತಾರೆ, ಹುಡುಕುತ್ತಾರೆ ಎಂಬುದು ಅಚ್ಚರಿ ಹಾಗೂ ವಾಸ್ತವ.
ಇದೊಂದೇ ವಿಷಯದಲ್ಲಿ ಅಲ್ಲ, ಅಪರಿಚಿತ ತಾಣದಲ್ಲಿ ಆಕೆಯ ಫೋಟೊ ಅಥವಾ ವೀಡಿಯೋ ಕಂಡರೆ ಸಾಕು, ತಕ್ಷಣ ಕ್ಲಿಕ್ ಮಾಡಿಬಿಡುತ್ತಾರೆ. ಅಲ್ಲಿಗೆ ಕಥೆ ಮುಗಿದಂತೆ. ಮಹಾಮಾರಿ ವೈರಸ್ ದಾಳಿ ಪ್ರಾರಂಭವಾಗಿ ಬಿಡುತ್ತದೆ. ಇಂಟರ್ ನೆಟ್ ನಲ್ಲಿ ಇರುವ ಸಾವಿರಾರು ವೈಬ್ ಸೈಟ್ ಗಳಲ್ಲಿ ಹೀಗೆ ಸನ್ನಿ ಹುಡುಕುವುದರಿಂದ ಕ್ಷಣಾರ್ಧದಲ್ಲಿ ಹೇರಳ ವೃಸ್ ಗಳು ಅಲ್ಲಿಂದಿಲ್ಲಿಗೆ ಓಡಾಡಿಬಿಡುತ್ತವೆ. ಶೇ. 10 ರಷ್ಟು ಸನ್ನಿ ಹುಡುಕಾಟದ ಮೂಲಕವೇ ವೈರಸ್ ಓಡಾಡುತ್ತದೆಯಂತೆ.
ಹೀಗಾಗಿ ಸನ್ನಿ ಎಲ್ಲಾ ರೀತಿಯಿಂದ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಈಗ, ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಕತ್ರಿನಾ ಎರಡನೆ ಸ್ಥಾನಕ್ಕೆ ಸರಿದಿದ್ದರೆ ಕಳೆದ ವರ್ಷ ಎರಡರಲ್ಲಿದ್ದ ಕರೀನಾ ಮೂರನೆ ಸ್ಥಾನಕ್ಕೆ ಜಾರಿದ್ದಾರೆ. ಮೊದಲ ಸ್ಥಾನವನ್ನು ಇನ್ಯಾರು ಗಳಿಸಿದ್ದಾರೆ ಎಂಬುದು ಅರ್ಥವಾಯಿತಲ್ಲವೇ? ಹೌದು, ನಿಮ್ಮ ಊಹೆಯಂತೆಯೇ ಅದು ಸನ್ನಿ ಲಿಯೋನ್......

ದಯವಿಟ್ಟು ನಿಮ್ಮ ಅನಿಸಿಕೆ ತಿಳಿಸಿ ಓದಿದ ನಂತರ ..
ನಿಮ್ಮ ನಾರಾಯಣಗೌಡ